ಸೋಮವಾರ, ನವೆಂಬರ್ 14, 2016

ನಿಮ್ ಹತ್ರ 500 ರೂಪಾಯಿಗೆ change ಇದ್ರೆ ಕೊಡ್ತೀರಾ???

   ಇವತ್ತು hair cut ಮಾಡ್ಸೋಣಂತ ಸಲೂನ್ಗೆ ಹೋಗಿದ್ದೆ, ಅವನು change ಇದ್ರೆ ಮಾತ್ರ hair cut ಮಾಡೋದು ಅಂತನೆ!! ಅಜ್ಜಿ ಪುಣ್ಯಕ್ಕೆ  ನನ್ನತ್ರ change ಇತ್ತು, so ಬಚವಾದೆ. Phoneಗೆ reacharge ಮಾಡ್ಸಕ್ ಹೋದಗ್ಲು same problem repeat!!!
   Bike serviceಗೆ ಕೊಡೋಣಂತ ಮೊನ್ನೆ ಬೆಳಿಗ್ಗೆ showroom ಹೋಗಿದ್ದೆ. ಹೇಗೂ money problem ಮೊನ್ನೆ  8ನೇ ತಾರಿಕ್ನಿಂದ ಶುರುವಾಗಿದ್ಯಲ್ಲ so ಮೊದ್ಲು ನಾನು receptionನತ್ರ ಕೇಳಿದ್ದು card accept ಮಾಡ್ತಿರಾ ಅಂತ? ಅದ್ಕ್ ಅವ್ನು ಇಲ್ಲ ಸಾರ್ machine ರೆಡಿ ಮಾಡಿಸ್ತಿವಿ ನಾಳೆ ಬನ್ನಿ ಅನ್ನೋದೆ!!!
   ಹೀಗೆ  bikeನಲ್ಲಿ ನಿನ್ನೆ ಹೋಗ್ತ ಇದ್ದಗ fuel  reserveಗೆ ಬಂದಿತ್ತು, ಪುಣ್ಯ ಮೊದಲೆ ಗೊತ್ತಾಯಿತು, ಯಾವಗ್ಲೂ fuel dry ಆದ್ಮೆಲೆ petrol  bunkವರೆಗೆ ತಳ್ಕೊಂಡು ಹೋಗಿ ಅಭ್ಯಾಸ ನೋಡಿ!! ಹಾಗಾಗಿ ಹೇಳ್ದೆ.
Petrol reserveಗೆ ಬಂದಿದೆ? ಕೈಯಲ್ಲಿ change ಇಲ್ಲ ,card ಬೇರೆ ತಕೊಂಡ್ ಹೋಗಿಲ್ಲ, ನನ್ನತ್ರ ಇದ್ದಿದ್ದು ಮೊನ್ನೆ 8ನೇ ತಾರಿಕಿಂದ ಹಳೆದಾಯಿತಲ್ವ ಅದೇ 500 ರೂಪಾಯಿ. ಕೆಲವು petrol bunkವ್ರು cash ತಗೋಳ್ತ ಇಲ್ಲ ಅಂತ ಗೊತ್ತಿತ್ತು, ಹಾಗಗಿ ಮೊದ್ಲೆ cash ತಗೋತಿರಾಂತ ಕೇಳ್ದೇ??? ಅವ್ನು ತಗೋತಿವಿ but 500ಗೆ change ಇಲ್ಲ ಅಂತಾನೆ!! ಸರಿ ಆಯ್ತು 500 ರೂಪಾಯಿಗೆ ಹಾಕು ಅಂತ ಬೇಜಾರಲ್ಲಿ ಹೇಳ್ದೆ. ಪಾಪ ಅವ್ನಿಗೆ ನನ್ನ ನೋಡಿ ಕರುಣೆ ಉಕ್ಕಿ ಬಂದು 350rsಗೆ petrol ಹಾಕಿ ಚೇಂಜೂ ಕೊಟ್ಟ, ನಾನು ಅವ್ನಿಗೆ ಒಂದು thanks ಹೇಳ್ಬಿಟ್ಟು ಹೊರಟೆ.
ಸುಮಾರ್ ಜನ್ರ cardಲ್ಲಿ cash ಇದೆ but ಒಂದ್ tea ಕುಡಿಯೋಕೆ card use ಆಗಲ್ವೆ.. ಹಂಗಾಗಿ ಸ್ವಲ್ಪ ದಿನಕ್ಕೆ ಜನ್ರತ್ರ ದುಡ್ಡಿದ್ರು ಭಿಕರಿನೆ ಬಿಡಿ.
ಕ್ಯೂ ನಿಲ್ಲೋದು ನನ್ಗೆ common ಆಗ್ಬಿಟಿದ್ದೆ ಕಾಲೇಜಲ್ಲಿ  fees ಕಟ್ಟೋಕೆ, ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯೋಕೆ, film thetreಲ್ಲಿ ticket ತಗೊಳೋಕೆ ಹೀಗೆ ಅನೇಕ ಸಲ. ನೋಟ್ ಬ್ಯಾನ್ ಆದ್ಮಲೆ ಕ್ಯೂ ನಿತ್ಕೊಳ್ದೆರೂರೆಲ್ಲಾ ನಿತ್ಕೊಂಬಿಟ್ರು ನೋಡಿ ಅದೇ ನನ್ಗೆ ಖುಷಿ ಆಗಿದ್ದು.
ದುಡ್ಡೆ ದೊಡ್ಡಪ್ಪ ಅಂತ ನಂಬಿದ್ದವ್ರುದ್ದು ಚಳಿ ಬಿಟ್ಟೋಗಿದೆ. ಈಗ ನಮ್ google search engineನಲ್ಲಿ ಹೆಚ್ಚು ಸರ್ಚ್ ಆಗ್ತಿರೊ ವಿಷ್ಯ ಏನ್ ಗೊತ್ತ "How to convert black money into white" ಈ ವಿಷ್ಯ ಕೇಳಿ ನನ್ಗೆ ನಗೂನೇ ತಡಿಯೋಕೆ ಆಗ್ತಿಲ್ಲಾ.
"8ನೇ ತಾರಿಕ್ನಂದು ಮೊದಲ ಸಲ ಎಲ್ಲಾ ಬಡವ್ರು ಮಲಗಿದ್ರು, ಆದರೆ ಶ್ರೀಮಂತರು ನಿದ್ದೆ ಮಾಡಲು ನಿದ್ರೆ ಮಾತ್ರೆ ಮೊರೆ ಹೋದ್ರು" ಅಂತ ಸ್ವತಃ ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಇವತ್ತು ಬೆಳಗಾವಿಯಲ್ಲಿ ತಮ್ಮ ಭಾಷಣದಲ್ಲಿ ಹೇಳಿದ್ರು. ಎಷ್ಟೇ ಕಷ್ಟ ಆದ್ರೂ ಕೆಲವು ದಿನ ಅಷ್ಟೇ ಬಿಡಿ, ಎಲ್ಲಾ ಮಹಾ ಕಳ್ಳರು ತಮ್ಮ ಆಟ ನಿಲ್ಲಿಸೋ time ಬಂದಿದೆ. ಮುಂದೆ ನಮ್ಮ ದೇಶದಲ್ಲಿ ಏನೋ ಒಂದು ಬದಲಾವಣೆ ಬಂದೆ ಬರುತ್ತೆ ಅನ್ನೊ ನಂಬಿಕೆ.

ಶನಿವಾರ, ನವೆಂಬರ್ 5, 2016

ಅನ್ನಧಾತೋ ಸುಖೀಭವ|||

ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ, ಎಂಬ ಗಾದೆ ಕೇಳಿರುತ್ತಿರಿ ಹಾಗೆಯೇ ಅತಿಯಾದರೆ ಅಮೃತವು ವಿಷ ಎಂಬ ಗಾದೆ ಕೂಡ ಕೇಳಿರುತ್ತಿರಿ. ಆದ್ದರಿಂದ ನಮ್ಮ ಹೊಟ್ಟೆ ತುಂಬುವಷ್ಟು ಊಟ ಮಾಡಿ ಉಳಿದಿದ್ದರೆ ಹಾಳು ಮಾಡದೆ ಯಾರದರು ಹತ್ತಿರದಲ್ಲಿ ಬಡವರಿದ್ದರೆ ಅವರಿಗೆ ದಾನ ಮಾಡಿ ಪುಣ್ಯ ಸಂಪಾದನೆ ಮಾಡಬಹುದು. "ಎಲ್ಲಾ ರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ" ಎಂದು ದಾಸರು ಹೇಳಿದ್ದಾರೆ. ಮನುಷ್ಯನಿಗೆ ಅನಿವಾರ್ಯ ಮತ್ತು ಅಗತ್ಯ ವಾಗಿರುವುದು ಆಹಾರ ಮತ್ತು ಬಟ್ಟೆ. ಇದಕ್ಕಾಗಿಯೇ ಮನುಷ್ಯರಾದ ನಾವು ಕೆಲಸ ಮಾಡಿ ಹಣ ಸಂಪಾದನೆ ಮಾಡುತ್ತಿರುವುದು.
"ತುತ್ತು ಅನ್ನ ತಿನ್ನೋಕೆ... ಬೊಗಸೆ ನೀರು ಕುಡಿಯೋಕೆ... ತುಂಡು ಬಟ್ಟೆ ಸಾಕು ನನ್ನ ಮಾನ  ಮುಚ್ಚೋಕೆ.. ಅಂಗೈಯಗಲ ಜಾಗ ಸಾಕು ಹಾಯಾಗಿರೋಕೆ..!!" ಹೀಗೆ ಹಾಡಿದವರು ನಮ್ಮ ಸಾಹಸ ಸಿಂಹ ವಿಷ್ಣುವರ್ಧನ್. ಮೊನ್ನೆ ಗ್ರಾಫಿಕ್ಸ್ ನಲ್ಲಿ ವಿಷ್ಣು ಅಭಿನಯಿಸಿದ ನಾಗರಹಾವು ಚಿತ್ರ ಬಿಡುಗಡೆಯಾಯಿತು. ಬಿಡುಗಡೆ ದಿನ ಬೆಂಗಳೂರಿನ ಭೂಮಿಕ ಥಿಯೇಟರ್ ಬಳಿ ವಿಷ್ಣು ಅಭಿಮಾನಿಗಳು ಅನ್ನದಾನ ಹಮ್ಮಿಕೊಂಡಿದ್ದರು. ಒಬ್ಬ ಮೇರುನಟ, ಕರ್ನಾಟಕ ಚಲನಚಿತ್ರಗಳ ದಂತಕಥೆ, ನಮ್ಮ ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಅನ್ನದಾನ ಮಾಡಿದ ಅಭಿಮಾನಿಗಳಿಗೆ ನಿಜಕ್ಕೂ ಒಂದು ಸೆಲ್ಯೂಟ್.
ಮನುಷ್ಯ ತಿನ್ನುವುದಕ್ಕಾಗಿ ಬದುಕಬಾರದು, ಆದರೆ ಬದುಕುವುದಕ್ಕಾಗಿ ತಿನ್ನಬೇಕು.

ಭಾರತೀಯ ಸಂಸ್ಕೃತಿಯಲ್ಲಿ ಅನ್ನದಾನಕ್ಕೆ ಬಹಳ ಮಹತ್ವವಿದೆ. ಶ್ರೀ ಸತ್ಯನಾರಾಯಣ ಸ್ವಾಮಿ ವ್ರತ ಕಥೆಯಲ್ಲಿ ಅನ್ನದಾನ ಮಾಡಬೇಕೆಂಬ ಉಲ್ಲೇಖವಿದೆ. ಯಾವುದೇ ಶುಭಕಾರ್ಯಕ್ರಮಗಳಲ್ಲಿ ಅನ್ನದಾನಕ್ಕೆ ಪ್ರಾಶಸ್ತ್ಯ ನೀಡುತ್ತೆವೆ.
ಅನ್ನದಾನಕ್ಕೂ ಧಾರ್ಮಿಕ ಕ್ಷೇತ್ರಗಳಿಗೂ ಒಂದು ಬಿಡಿಸಲಾಗದ ಸಂಬಂಧವಿದೆ. ಹಸಿದಾಗ ಲೋಕವೆ ಕಾಣುವುದಿಲ್ಲ ಇನ್ನು ದೇವರು ಕಾಣುತ್ತಾನೆಯೇ. ಆದ್ದರಿಂದಲೇ ದೇವಸ್ಥಾನಗಳಲ್ಲಿ ಅನ್ನದಾನವನ್ನು ಏರ್ಪಡಿಸಿರಬಹುದು.
ಅನ್ನಪೂರ್ಣೆ ಸದಾ ಪೂರ್ಣೆ|
ಶಂಕರೇ ಪ್ರಾಣವಲ್ಲಭೆ||
ಜ್ಞಾನ ವೈರಾಗ್ಯ ಸಿದ್ಯಾಥಂ|
ಭಿಕ್ಷಂ ದೇಹಿಚ ಪಾರ್ವತಿ||
ಈ ಸಂಸ್ಕೃತ ಶ್ಲೋಕ ಸಾಮಾನ್ಯವಾಗಿ ಅನ್ನದಾನ ನಡೆಯುವ ಎಲ್ಲಾ ಕ್ಷೇತ್ರಗಳಲ್ಲಿ ಬರೆದಿರುತ್ತಾರೆ. ಕರ್ನಾಟಕದ  ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಅನ್ನ ಸಂತರ್ಪಣೆ ನಡೆಯುತ್ತಿಲಿದೆ. ಹೊರನಾಡು ಶ್ರೀ ಅನ್ನಪೂರ್ಣೆಶ್ವರಿ ಕ್ಷೇತ್ರ ಅನ್ನದಾನಕ್ಕೆ ಪ್ರಸಿದ್ಧಿ ಹೊಂದಿದೆ, ಇಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತರು ಅನ್ನದಾನದಲ್ಲಿ ಪಾಲ್ಗೊಳ್ಳುತ್ತಾರೆ. ನನಗೆ ಈ ಕ್ಷೇತ್ರದಲ್ಲಿ ಊಟ ಮಾಡಿದಾಗ ಅಮೃತವನ್ನೇ ಸೇವಿಸಿದನೇನೋ ಎಂಬ ಭಾವ ಬಂದಿತ್ತು. ಇಲ್ಲಿಯ ಊಟದ ರುಚಿಯನ್ನು ಯಾವ ಪದಗಳಲ್ಲಿ ಹೇಳಲು ಅಸಾಧ್ಯ. ಇದಕ್ಕೆಲ್ಲ ತಾಯಿ ಅನ್ನಪೂರ್ಣೇಶ್ವರಿಯ ಕೃಪೆಯೇ ಕಾರಣ ಎಂದರೆ ತಪ್ಪಾಗಲಾರದು.
ಹೆಸರಲ್ಲೇ  ಧರ್ಮ ಇರುವುದು ಶ್ರೀ ಕ್ಷೇತ್ರ ಧರ್ಮಸ್ಥಳ,  ಇಲ್ಲಿ ಊಟ ಮಾಡಲು ಶ್ರೀ ಮಂಜುನಾಥ ಸ್ವಾಮಿಯ ಕೃಪೆವೊಂದಿದ್ದರೆ ಸಾಕು. ಶ್ರೀ ಕ್ಷೇತ್ರದಲ್ಲಿ ಸರಿ ಸುಮಾರು 50 ಸಾವಿರ ಮಂದಿ  ಪ್ರತಿ ದಿನ ಊಟ ಮಾಡುತ್ತಾರೆ. ಭಾರತದ ಬೃಹತ್ ಅಡುಗೆ ಕೋಣೆಗಳ ಪಟ್ಟಿಯಲ್ಲಿ ಧರ್ಮಸ್ಥಳದ ಅಡುಗೆಕೋಣೆ ಕೂಡ ಸೇರ್ಪಡೆಗೋಂಡಿದೆ. ಇನ್ನೊಂದು ಕುತೂಹಲಕಾರಿ ವಿಷಯವೇನೆಂದರೆ ಇಲ್ಲಿ ಅಡುಗೆ ಮಾಡಲು ಜೈವಿಕ ಇಂಧನವನ್ನು ಬಳಸುತ್ತಾರೆ. ನ್ಯಾಷನಲ್ ಜಿಯೋಗ್ರಾಫಿಕ್ ಛಾನಲ್ ನಲ್ಲಿ ಜೂನ್ 22 ರಂದು "ಮೆಗಾ ಕಿಚನ್" ಎಂಬ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಅಡುಗೆಕೋಣೆ ತೋರಿಸಿದ್ದು ಬಹಳ ಸಂತಸದ ವಿಚಾರ.
ದಕ್ಷಿಣ ಕನ್ನಡ ಜಿಲ್ಲೆ ಧಾರ್ಮಿಕ ಕ್ಷೇತ್ರಗಳಿಗೆ ಹೆಸರುವಾಸಿ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಸರಾಸರಿ ಐದು ಸಾವಿರದಿಂದ ಹತ್ತು ಸಾವಿರ ಮಂದಿಗೆ ಅನ್ನದಾಸೋಹ ನಡೆಸಲಾಗುತ್ತಿದೆ. ಶ್ರೀ ಕ್ಷೇತ್ರದಲ್ಲಿ ತಯಾರಿಸುವ ಹಾಲಿನ ಪರಮಾನ್ನದ (ಪಾಯಸ) ರುಚಿ ಬಾಯಲ್ಲಿ ನೀರೂರಿಸುತ್ತದೆ. ಈ ಕ್ಷೇತ್ರದಲ್ಲಿ ಭಕ್ತಾದಿಗಳಿಗಲ್ಲದೆ 3500 ಶಾಲ ಮಕ್ಕಳಿಗೆ ಅನ್ನ ಸಂತರ್ಪಣೆ ನಡೆಯುತ್ತಿದೆ. ಇನ್ನೊಂದು ವಿಶೇಷ ಏನೆಂದರೆ ಕೈಸ್ತ ಸಂಸ್ಥೆಗಳು ನಡೆಸುತ್ತಿರುವ ವಿಶೇಷ ಶಾಲೆಗಳ ಮಕ್ಕಳಿಗೂ ಅನ್ನದಾನ ಮಾಡುತ್ತಿರುವುದು ಸಾಮರಸ್ಯದ ವಿಷಯವಾಗಿದೆ. ವಾರ್ಷಿಕವಾಗಿ 2 ರಿಂದ 3 ಕೋಟಿ ಅನ್ನದಾನಕ್ಕಾಗಿ ಶ್ರೀ ಕ್ಷೇತ್ರ ವೆಚ್ಚ ಮಾಡುತ್ತಿದೆ. ಇಲ್ಲಿ ಅನ್ನದಾನ ಮಾಡಲು ಇಚ್ಛಿಸುವ ಭಕ್ತರಿಗೆ 80ಜಿ ವಿನಾಯಿತಿ ಇರುತ್ತದೆ.
ಉಳಿದಂತೆ ಉಡುಪಿ ಶ್ರೀಕೃಷ್ಣ ಮಠ, ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ, ಶೃಂಗೇರಿ ಶಾರದಾ ಪೀಠ, ಮುಂತಾದ ಎಲ್ಲಾ ಧಾರ್ಮಿಕ ಕ್ಷೇತ್ರಗಳಲ್ಲಿ ಅನ್ನ ದಾಸೋಹ ನಡೆಯುತ್ತಲಿದೆ.
ಕೊಡಗಿನ ಭಾಗಮಂಡಲದ ತಲಕಾವೇರಿ ಕ್ಷೇತ್ರ, ಪಾಡಿ ಇಗ್ಗುತಪ್ಪ ಕ್ಷೇತ್ರ ಮತ್ತು ಬಾಡಗರಕೇರಿ ಶ್ರೀ ಮೃತ್ಯುಂಜಯ ಕ್ಷೇತ್ರದಲ್ಲಿ ದಿನಂಪ್ರತಿ ಅನ್ನ ಸಂತರ್ಪಣೆ ನಡೆಯುತ್ತಿದೆ. ಗೋಣಿಕೊಪ್ಪದ ಶ್ರೀ ಉಮಾಮಹೇಶ್ವರಿ ದೇವಸ್ಥಾನಲ್ಲಿ ಸುಬ್ರಮಣ್ಯ ಷಷ್ಠಿ, ಯುಗಾದಿ, ಶಿವರಾತ್ರಿ, ಗಣೇಶ ಚತುರ್ಥಿ, ದಸರಾ ಮುಂತಾದ ವಿಶೇಷ ದಿನಗಳಲ್ಲಿ ಮತ್ತು ಪ್ರತಿ ತಿಂಗಳ ಹುಣ್ಣಿಮೆಯಂದು ನಡೆಯುವ ಸಾಮೂಹಿಕ ಸತ್ಯನಾರಾಯಣ ಪೂಜೆಯ ಸಂದರ್ಭಲ್ಲಿ ಅನ್ನ ದಾನ ನಡೆಸುತ್ತಾರೆ.
ನಮ್ಮ ದೇಶದ ಬೆನ್ನೆಲುಬು ಎಂದು ಕರೆಸುಕೊಳ್ಳುವ ರೈತರನ್ನು ನಾವು ಅನ್ನದಾತ ಎಂದು ಕರೆಯುತ್ತೇವೆ. ಆದರೆ ಆ ಅನ್ನದಾತ ಬರಗಾಲ ಎಂಬಿತ್ಯಾದಿ ಸಂಕಷ್ಟಗಳಿಗೆ ತುತ್ತಾಗುತ್ತಿದ್ದಾನೆ. ಸರ್ಕಾರ ರೈತರ ಬಗೆಗಿನ ವಿಚಾರವನ್ನು ಹಗುರವಾಗಿಯೇ ತೆಗೆದುಕೊಳ್ಳುತ್ತಿದೆ. ರಾಜಕೀಯ ಸಮಾವೇಶಗಳಲ್ಲಿ ಭಕ್ಷ್ಯ ಬೋಜನಗಳನ್ನು ಚೆಲ್ಲಾಡುತ್ತಾರೆ. ಮೊನ್ನೆ ಮೈಸೂರು ದಸರಾ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ವಿಐಪಿಗಳು ಅಲ್ಲಿ ಚೆಲ್ಲಾಡಿದ ಭಕ್ಷ್ಯಗಳನ್ನು ನೋಡಿದಾಗ ಇವರೆನೆಲ್ಲ ವಿಐಪಿಗಳು ಎಂದು ಕರೆದವರು ಯಾರು ಎಂದನಿಸುತ್ತದೆ.
ನಮ್ಮ ದೇಶದಲ್ಲಿ ಒಬ್ಬ ಬಡವ ಊಟ ಮಾಡುವುದಕ್ಕು ಮತ್ತು ಒಬ್ಬ ಶ್ರೀಮಂತ ಊಟ ಮಾಡುವುದಕ್ಕು ವ್ಯತ್ಯಾಸ ಇರುವುದು ದುರದೃಷ್ಟ. ಶ್ರೀಮಂತನ ಊಟದ ತಟ್ಟೆಯಲ್ಲಿ ಯಾವಗಲು ಅನ್ನ ವ್ಯರ್ಥವಾಗುತ್ತದೆ. ಶ್ರೀಮಂತರ ಆಡಂಬರದ ಭೋಜನ ಕೂಟಗಳಲ್ಲಿ ಬಿಸಾಡುವ ಅನ್ನದ ಪ್ರಮಾಣಗಳಲ್ಲಿ ಬಡವರು ಹಲವಾರು ದಿನಗಳು  ಊಟ ಮಾಡಬಹುದು.
ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ತಮ್ಮ ಹೆಸರು ಹೇಳದೆ ಅನ್ನದಾನ ಮಾಡುತ್ತಿರುವವರು ನಮ್ಮ ನಡುವೆ ಇದ್ದಾರೆ. ಹಲವು ಸಂಘ ಸಂಸ್ಥೆಗಳು, ಟ್ರಸ್ಟ್ ಗಳು, ವಿಶೇಷ ಮಕ್ಕಳ ಶಾಲೆಗಳ ಆಡಳಿತ ಮಂಡಳಿಯವರು ತಮ್ಮ ಜೀವನ್ನೆ ಸಮಾಜದ ಏಳಿಗೆಗಾಗಿ ಮುಡುಪಾಗಿಟ್ಟಿದ್ದಾರೆ. ಇಂತಹ ಸಮಾಜ ಸೇವಕರು ನಮ್ಮ ದೇಶದ ಅಮೂಲ್ಯ ರತ್ನಗಳು. ಇಂತಹ ರತ್ನಗಳಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡುವುದು ಒಳ್ಳೆಯದು ಎಂಬುವುದು ನನ್ನ ಉದ್ದೇಶ.