ಶುಕ್ರವಾರ, ಜೂನ್ 8, 2018

#Focus_for_peace_of_mind

ಎರಡು ವಿಧದ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ. category 1: ನಾವೇನೆ ಮಾಡಿದರು ನಮ್ಮನ್ನು ಅರ್ಥಮಾಡಿಕೊಳ್ಳದಂತಹ ವ್ಯಕ್ತಿಗಳು. ನಮ್ಮ ತಪ್ಪುಗಳನ್ನು ಮಾತ್ರ ಎತ್ತಿ ತೋರಿಸುವವರು. ಉದಾಹರಣೆಗೆ ಅವರು ನಮ್ಮ Boss ಆಗಿರಬಹುದು, ನಮ್ಮ coligue ಆಗಿರಬಹುದು ಅಥವಾ ನಮ್ಮ family members ಕೂಡ ಆಗಿರಬಹುದ. ಅವರ ಬಗ್ಗೆ ಯೋಚಿಸಿದಾಗ ನಾವು distrub ಆಗಬಹುದು. ಅವರಿಗೆ ವಿಷಯಗಳನ್ನು ಅರ್ಥ ಮಾಡಿಸಿಕೊಳ್ಳುವುದರಲ್ಲಿ ನಾವು ವಿಫಲವಾಗಬಹುದು.
ಇನ್ನು category 2 ವ್ಯಕ್ತಿಗಳು ನಮ್ಮೋಂದಿಗೆ ಇದ್ದಾರೆ, ನಾವು ಹೇಗೆ ಇದ್ದೇವೆ ಹಾಗೆಯೇ accept ಮಾಡಿಕೊಳ್ಳುವಂತಹ ವ್ಯಕ್ತಿಗಳು ಅವರು. ಯಾವಾಗ ಬೇಕಾದರೂ Help ಮಾಡಲು ready ಇರುವಂತಹ ವ್ಯಕ್ತಿಗಳು. ನಾವು focus ಮಾಡಬೇಕಾಗಿರುವುದು ಅಂತಹ ವ್ಯಕ್ತಿಗಳ ಬಗ್ಗೆ ಮಾತ್ರ.
" ಕೆಲವು ಬಾಗಿಲುಗಳನ್ನು ಮುಚ್ಚುವುದೇ ಒಳ್ಳೆಯದು ಅದು ಅಹಂಕಾರದಿಂದ ಅಥವ ದ್ವೇಷದಿಂದ ಅಲ್ಲ.
ಆ ಬಾಗಿಲು ತೆರೆದಿಟ್ಟರೆ ಬೆಳಕು ಬರುವುದಿಲ್ಲ, ಗಾಳಿಯು ಬರುವುದಿಲ್ಲ" ಎಂಬ ಮಾತಿನಂತೆ ನಮ್ಮನ್ನು irritate ಮಾಡುವ ವ್ಯಕ್ತಿಗಳನ್ನು ನೋಡದೆ ಕಣ್ಣುಮುಚ್ಚಿಕೊಳ್ಳಬೇಕು ಮತ್ತು ನಮ್ಮ ಗೆಳೆತನ ಬಯಸುವ, ನಮ್ಮನ್ನು ಪ್ರೀತಿಸುವವರ ಮುಂದೆ ನಮ್ಮ ಕಣ್ಣು ತೆರೆಯಬೇಕು.
Peace of mind ಅಲ್ಲಿಯೇ ಸಿಗುವುದು, ಅಲ್ಲಿ ಮಾತ್ರ ಸಿಗುವುದು.

ಶುಕ್ರವಾರ, ನವೆಂಬರ್ 3, 2017

ಅಂತೆ-ಕಂತೆ ಎಂಬ ಮೂರ್ಖರ ಲೋಕ

ಮೊನ್ನೆ Facebook ನೋಡಿದಾಗ ನನ್ನ ಗೆಳೆಯನೊಬ್ಬ status ಹಾಕುತ್ತಾನೆ " There is a line between friend and girlfriend, but she is my best friend" ಎಷ್ಟು ಸೊಗಸಾಗಿದೆ, ನನಗೆ ತುಂಬ ಇಷ್ಟವಾಗಿ ಒಂದು ಲೈಕು ಒತ್ತಿದೆ.
ನಮ್ಮ ಸ್ನೆಹಿತರ ಗುಂಪಿನಲ್ಲಿ ಹುಡುಗಿಯರು ಕೂಡ ಇರುತ್ತಾರೆ, ಆಗ ನಾವೆಲ್ಲಾದರು ತುಂಬಾ ಕ್ಲೋಸ್ ಆಗಿ ಮಾತನಾಡುತ್ತಿದ್ದರೆ ಅದನ್ನು ಸಹಿಸದ ಕೆಲವು ವ್ಯಕ್ತಿಗಳು ಕೆಟ್ಟದಾಗಿ ಮಾತನಾಡಿಕೊಳ್ಳುವುದು ಒಂದು ರೀತಿಯ ಖಾಯಿಲೆ, ಇಂತಹ ಖಾಯಿಲೆಯಿಂದ ಬಳಲುತ್ತಿರುವವರು ನಮ್ಮ ನಡುವೆಯೇ ಇದ್ದಾರೆ. ಈ ಖಾಯಿಲೆ ಇರುವವರು ಯಾರದರು ಹುಡುಗ-ಹುಡಗಿ ಮಾತನಾಡುತ್ತಿದ್ದರೆ ಸಾಕು ಅವರ ಬಗೆಗಿನ ಕಥೆ, ಚಿತ್ರಕಥೆಗಳನ್ನು ತಯಾರಿಸಿ ಒಬ್ಬರ ಬಾಯಿಂದ ಇನ್ನೊಬ್ಬರಿಗೆ ಹಂಚುತ್ತಾ ಮಜಾ ಪಡೆಯುತ್ತಾರೆ. ಹೀಗೆ ಕೆಲವರು ಕಥೆ ಹೆಣೆಯುವುದರಲ್ಲಿ ನಿಸ್ಸೀಮರಾದರೆ ಕೆಲವರಿಗೆ ಹಾಸ್ಯ ಮಾಡುವ ನೆಪದಲ್ಲಿ ಇನ್ನೊಬ್ಬರ ವಿಷಯಗಳು ಪ್ರಾಮುಖ್ಯತೆ ವಹಿಸುತ್ತವೆ. ಇಂತಹ ವ್ಯಕ್ತಿಗಳಿಂದ ಸೂಕ್ಷ್ಮ ಮನಸ್ಸಿರುವವರಿಗೆ ನೋವು ಆಗುವುದ ಸಹಜ.
ನಿಮಗೆ ಯಾರದರು ನಿಮ್ಮ ಬಗೆಗಿನ ಗಾಸಿಪ್ ತಯಾರಿಸಿ ನಿಮ್ಮ ಬಳಿಯೇ ಹೇಳಿದರೆ ನೀವು ಸ್ಪಷ್ಟ ಪಡಿಸಬಹುದು, ಆ ವಿಷಯದಲ್ಲಿ ಎಷ್ಟು ಸತ್ಯಾಂಶವಿದೆ ಮತ್ತು ಎಷ್ಟು ಸುಳ್ಳು ಎಂಬ ಬಗೆಗೆ ಅವಲೋಕಿಸಿ ಆತನಿಗೆ ಮನವರಿಕೆ ಮಾಡಬಹುದು, ಇಷ್ಟಾದರೂ ಆ ವ್ಯಕ್ತಿಯ ಮೂರ್ಖತನದ ಮಾತುಗಳು ನಿಲ್ಲದಿದ್ದರೆ ಅವನನ್ನು ನಿರ್ಲಕ್ಷ್ಯಿಸುವುದು ಒಳಿತು. ಎಷ್ಟು ಬೇಕಾದರು ಹೇಳಿಕೊಳ್ಳಲಿ ಇದರಿಂದ ಆತನಿಗೇನಾದರು ಮನಸ್ಸಿಗೆ ಶಾಂತಿ ಸಿಗುವುದಾದರೆ ಸಿಗಲಿಬಿಡಿ.
ಇನ್ನೊಂದಷ್ಟು ಜನ ಬೇರೆಯವರ ಮೇಲೆ ತನಗೆ ಕರುಣೆ ಇದೆ ಎಂದು ಅಂತೆ-ಕಂತೆ ಸೃಷ್ಟಿಸುತ್ತಾರೆ, ಮತ್ತೊಂದಷ್ಟು ಜನರಿಗೆ ತಮ್ಮ ಇರುವಿಕೆ ಬೇರೆಯವರಿಗೆ ತಿಳಿಯಲಿ ಅಥವ ತಮ್ಮ ಬಗೆಗಿನ ಗಮನ ಇತರರಿಗೆ ಕಡಿಮೆಯಾಗಿದೆ ಎಂದಾಗ ಗಾಸಿಪ್ ತಯಾರಿಸುವ ಕಾಂಟ್ರೆಕ್ಟ್ ವಹಿಸುಕೊಳ್ಳುತ್ತಾರೆ.
ಈಗ ಹೇಳಿ ಅಂತೆ-ಕಂತೆಗಳನ್ನು ತಯಾರಿಸಲು ಕಾರಣ ಹುಡುಕುವ ಮೂರ್ಖತನದ ಕೆಲಸವನ್ನು ಬಿಟ್ಟು ಜೀವನದಲ್ಲಿ ಅದೇಷ್ಟೋ ಒಳ್ಳೆಯ ವಿಷಯಗಳಿವೆ, ಆ ವಿಷಯಗಳ ಕಡೆ ಗಮನ ಹರಿಸಿದರೆ ಒಳಿತಾಗುವುದಿಲ್ಲವೆ!!!

ಭಾನುವಾರ, ಜನವರಿ 22, 2017

ಉಸ್ಸಪ್ಪಾ...!!!

ಗುಂಡಪ್ಪ ಮತ್ತು ಗುಂಡಮ್ಮನಿಗೆ ಲವ್ ಆಗಿತ್ತು, ಇಬ್ಬರು ಬೆಂಗಳೂರಿನಲ್ಲಿ ಒಂದೇ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು. ಗುಂಡಪ್ಪ ಗುಂಡಮ್ಮಳನ್ನು ಬೆಂಗಳೂರಿನೆಲ್ಲ ಸುತ್ತಾಡಿಸುತ್ತಿದ್ದ. ಒಮ್ಮೆ ಗುಂಡಮ್ಮಳನ್ನು ಗುಂಡಪ್ಪ ತನ್ನ ಮನೆಗೆ ಕಳೆದುಕೊಂಡು ಹೋಗಿ ಮನೆಯವರಿಗೆಲ್ಲ ಪರಿಚಯ ಮಾಡಿಸಿದ. ಆತನ ಮನೆಯಲ್ಲಿ ಅವನ ತಂದೆ-ತಾಯಿ, ಅಣ್ಣ-ಅತ್ತಿಗೆ ಮತ್ತು ಅಣ್ಣನ ಮಗ ಚಿಂಟು ವಾಸಿಸುತಿದ್ದರು. ಎಲ್ಲರಿಗೂ ಗುಂಡಮ್ಮ ಹಿಡಿಸಿದ್ದಳು.
ಹೀಗೆ ಎಲ್ಲರೂ ಹರಟುತಿದ್ದಾಗ ಗುಂಡಪ್ಪನ ಮಗ ಚಿಂಟು ಜೋರಾಗಿ ಊಸು ಬಿಟ್ಟ. ಆ ತಕ್ಷಣ ಗುಂಡಪ್ಪನಿಗೆ ನಗು ತಡಿಯಲಾಗಲಿಲ್ಲ. ಜೋರಾಗಿ ನಕ್ಕು ಚಿಂಟುನನ್ನು ಮೇಲಕ್ಕೆತ್ತಿ ತಮಾಷೆ ಮಾಡಿದ, ಇದನ್ನು ನೋಡಿದ ಗುಂಡಮ್ಮಳಿಗೆ ತುಬಾ ಭಯವಾಗಿತ್ತು. ಹೊಟ್ಟೆಯಲೆಲ್ಲ ತಳಮಳವಾಗತೊಡಗಿತು. ಭಯದಲ್ಲಿ ಬೆವರ ತೊಡಗಿದಳು. ಇಷ್ಟೆಲ್ಲ ಭಯ ಆತಂಕ ಗುಂಡಮ್ಮಳಿಗೆ ಏಕೆ ಮೂಡಿತ್ತು ಎಂದು ಆಶ್ಚರ್ಯವಾಗಬಹುದು. ಯಾಕೆಂದರೆ ನಾಳೆ ನಾನು ಮದುವೆಯಾಗಿ ಬಂದಾಗ ಎಲ್ಲಾದರು ಊಸು ಬಿಟ್ಟರೆ ತನ್ನ ಗಂಡ ಎಷ್ಟೆಲ್ಲಾ ಆಡಿಕೊಳ್ಳಬಹುದು ಎಂಬ ಆತಂಕ ಅವಳದಾಗಿತ್ತು. ಈ ಭಯ ಆ ತಕ್ಷಣ ನಿವಾರಣೆಯಾಗಲು ವಾಷ್ ರೂಮಿಗೆ ಹೋಗಿ ತನ್ನ ಹೊಟ್ಟೆಯಲ್ಲಿದ್ದ ಊಸನೆಲ್ಲಾ ಹೊರಗೆ ಬಿಟ್ಟಳು. ನಂತರ ಕಾಫಿ ತಿಂಡಿ ತಿಂದು ತನ್ನ ಪಿಜಿಗೆ ತೆರಳಿದಳು.
ಗುಂಡಮ್ಮಳಿಗೆ ಅಪನವಾಯು ಸಮಸ್ಯೆ. ಯಾವಗಲು ಅವಳ ಹೊಟ್ಟೆ ಕೆಟ್ಟು ಹೋಗಿರುತ್ತಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಯಾರಿಗೂ ಗೊತ್ತಗಾದಂತೆ ಹೇಗೆ ಊಸು ಬಿಡಬೇಕು ಎಂಬ ವಿಷಯವನ್ನು ಗೂಗಲ್ ನಲ್ಲಿ ಹುಡುಕಿ ಉತ್ತರ ಕಂಡುಕೊಂಡಿದ್ದಳು. ಗುಂಡಮ್ಮಳಿಗೆ ಅಪನವಾಯು ಪಿತ್ರಾಜಿತ ಆಸ್ಥಿ, ಗುಂಡಮ್ಮಳ ತಾಯಿ ಕಿಟ್ಟಕ್ಕ ಊಸು ಬಿಟ್ಟರೆ ಮೋಟರು ಸೈಕಲ್ ಹೋದಂತೆ ಶಬ್ದವಾಗುತ್ತದೆ, ಇನ್ನು ಅವಳ ತಂದೆ ಕಿಟ್ಟಣ್ಣ ಬಿಟ್ಟರಂತು ಬಾಂಬ್ ಸಿಡಿಯುವಂತ ಶಬ್ದ. ಹೀಗಿರುವಾಗ ಗುಂಡಮ್ಮಳಿಗೆ ಅಪನವಾಯು ಸಮಸ್ಯೆ ಬರದೇ ಇರುತ್ತದೆಯೇ.
ಗುಂಡಪ್ಪ ಮತ್ತು ಗುಂಡಮ್ಮಳ ಮನೆಯಲ್ಲಿ ಮಾತುಕತೆ ಮುಗಿದು ತಮ್ಮ ಕುಟುಂಬ ಸದಸ್ಯರು, ಸ್ನೇಹಿತರ ಸಮ್ಮುಖದಲ್ಲಿ ಅದ್ದೂರಿಯಾಗಿ ಇಬ್ಬರ ವಿವಾಹ ನೆರೆವೇರಿತು. ವಿವಾಹದಲ್ಲೂ ಗುಂಡಮ್ಮಳದ್ದು ಒಂದೇ ಸಮಸ್ಯೆ ಹೇಗೆ ಊಸು ಬಿಡಲಿ ಎಂದು!! ಊಸನ್ನು ಹೊಟ್ಟೆಯಲ್ಲೆ ಹಿಡಿದುಕೊಂಡು ಕಷ್ಟ ಪಡುತ್ತಿದ್ದಳು, ಹೀಗಾದಗ ಹೊಟ್ಟೆಯಿಂದ ಕೆಲವು ಶಬ್ದಗಳು ಬರತೊಡಗಿದವು, ಇದನ್ನು ಗಮನಿಸಿದ ಗುಂಡಪ್ಪ ಏನಾಯಿತು ಎಂದು ಪ್ರಶ್ನಿಸಿದಾಗ ಹಸಿವಿಗೆ ಹೊಟ್ಟೆ ಶಬ್ದ ಮಾಡುತ್ತಿದೆ ಎಂದು ಉತ್ತರಿಸಿದಳು.
ಗುಂಡಮ್ಮಳ ತಂದೆ-ತಾಯಿ ವಿವಾಹದಲ್ಲಿ ರಾಜಾರೋಷವಾಗಿ ಊಸು ಬಿಡುತಿದ್ದರು, ಅವರ ಕುಟುಂಬದವರಿಗೆ ಇವರ ಅಪನವಾಯು ಸಮಸ್ಯೆ ಗೊತ್ತಿದ್ದರಿಂದ ಯಾರು ನಗುತ್ತಿರಲಿಲ್ಲ ಆದರೆ ಗೊತ್ತಿಲ್ಲದವರಿಗೆ ಮದುವೆಯಲ್ಲಿ ಮಾತನಾಡಲು ಬೇರೆ ವಿಷಯ ಬೇಕಾಗಿರಲಿಲ್ಲ. ಇದನ್ನು ಗಮನಿಸುತಿದ್ದ ಗುಂಡಮ್ಮಳಿಗೆ ಸ್ವಲ್ಪ ಅಸಮಾಧಾನವಾಗಿತ್ತು. ತನ್ನ ತಂದೆ-ತಾಯಿಯನ್ನು ಕರೆದು ಜೋರಾಗಿ ಊಸು ಬಿಡಬೇಡಿ ಎಂದು ಎಚ್ಚರಿಸಿದಳು.
ಮದುವೆ ಎಲ್ಲಾ ಮುಗಿದು ಗುಂಡಪ್ಪ-ಗುಂಡಮ್ಮ ಬೆಂಗಳೂರಿನ ಮನೆಯಲ್ಲಿ ಖುಷಿಯಾಗಿ ವಾಸಿಸುತಿದ್ದರು. ಆದರೆ ಗುಂಡಮ್ಮಳಿಗೆ ತನ್ನ ಅಪನವಾಯು ಸಮಸ್ಯೆ ಗಂಡನಿಗೆ ಗೊತ್ತದರೆ ಏನು ಗತಿ ಎಂಬ ಚಿಂತೆ ಕಾಡುತ್ತಲೇ ಇತ್ತು.
ತನ್ನ ಗಂಡ ಗುಂಡಪ್ಪ ಬಾತ್ರೂಮಿಗೆ ಹೋದರೆ ಯಾವಾಗಲು ಬಕೇಟಿಗೆ ನೀರು ಬಿಟ್ಟು ಜೋರಾಗಿ ಶಬ್ದ ಮಾಡುತ್ತಿದ್ದನ್ನು ಗುಂಡಮ್ಮ ಗಮನಿಸಿದ್ದಳು. ಏಕೆ ಇಷ್ಟು ಶಬ್ದ ಮಾಡುತ್ತಾರೆ ಎಂದು ಮನಸ್ಸಿನಲ್ಲಿಯೇ ಯೋಚಿಸುತ್ತಿದ್ದಳು.
ಮನಸ್ಸಿನಲ್ಲಿದ್ದ ಸಂಶಯವನ್ನು ನಿವಾರಿಸಲು ತನ್ನ ಗಂಡನಲ್ಲಿ "ನೀವೂ ಬಾತ್ರೂಮಿಗೆ ಹೋದ ಮೇಲೆ ಜೋರಾಗಿ ಬಕೇಟಿಗೆ ನೀರು ಬಿಟ್ಟು ಶಬ್ದ ಏಕೇ ಮಾಡುತ್ತೀರಿ.??" ಎಂದು ಕೇಳಿಯೇ ಬಿಟ್ಟಳು. ಇದನ್ನು ಕೇಳಿದ ಗುಂಡಪ್ಪನಿಗೆ ಕಸಿವಿಸಿಯಾಯಿತು, ಏನೂ ಹೇಳಲಿ ಎಂದು ಚಡಪಡಿಸಿದನು, ಏಕೆಂದರೆ ಅವನಿಗೂ ಅಪಸವಾಯು ಸಮಸ್ಯೆ ಇತ್ತು. "ನಾನು ಟಾಯ್ಲೆಟ್ ಸೀಟಿನಲ್ಲಿ ಕುಳಿತಾಗ ವಾಯು ಕೂಡ ಹೊರ ಹೋಗುತ್ತದೆ, ಅದರ ಶಬ್ದ ಕೇಳದಿರಲಿ ಎಂದು ಬಕೇಟಿಗೆ ನೀರು ಬಿಟ್ಟು ಶಬ್ದ ಮಾಡುತ್ತೇನೆ." ಎಂದು ಗುಂಡಪ್ಪ ಉತ್ತರಿಸುತ್ತಾನೆ. ಇದನ್ನು ಕೇಳಿದ ಗುಂಡಮ್ಮಳಿಗೆ ನಗು ತಡೆಯಲಾಗುತ್ತಿಲ್ಲ, ಜೊತೆಗೆ ಮನಸ್ಸಿನಲ್ಲಿ ಒಂದು ಸಮಾಧಾನ ಕೂಡ, ಅಬ್ಬಾ ಇನ್ನು ಮುಂದೆ ತಾನು ಗಂಡನ ಮುಂದೆ ಊಸು ಬಿಡಬಹುದು ಎಂಬ ದೈರ್ಯ ಅವಳಲ್ಲಿ ಬಂತು. ಇದಾದ ಕೆಲವು ದಿನಗಳ  ನಂತರ ಗುಂಡಮ್ಮ ತನ್ನ ಗಂಡನ ಮುಂದೆಯೇ ಊಸು ಬಟ್ಟಳು, ಗುಂಡಪ್ಪನಿಗೆ ಆಶ್ಚರ್ಯವಾಯಿತು! ತನ್ನ ಹೆಂಡತಿ ಊಸು ಬಿಡುತ್ತಾಳೆ ಎಂದು ಅವನಿಗೆ ಅಂದೇ  ಗೊತ್ತಾಗಿದ್ದು. ನಿಜ ಹೇಳಬೇಕೆಂದರೆ ಅವನಿಗೆ ಹುಡುಗಿಯರು ಊಸು ಬಿಡುತ್ತಾರೆ ಎಂಬ ವಿಷಯವೇ  ಗೊತ್ತಿರಲಿಲ್ಲವಂತೆ.
ಹೀಗೆ ತಮ್ಮಿಬ್ಬರ ಊಸಿನ ವಿಷಯ ಪರಸ್ಪರ ಗೊತ್ತಾದ ಮೇಲೆ ಇಬ್ಬರು ಖುಷಿಪಟ್ಟರು, ಸಂತೋಷದಿಂದ ನಗುತ್ತ ಜೋರಾಗಿ ಊಸು ಬಿಟ್ಟು ಸಂಭ್ರಮಿಸಿದರು. ಊಸು ಬಡಲೆಂದೇ ಬೆಳಗ್ಗೆ ಜಾಗಿಂಗ್ ಹೋಗಲು ನಿಶ್ಚಯಿಸಿದರು. ಓಡುವಾಗ ವಾಯು ಅದಾಗಿಯೇ ಹೊರ ಬರುತ್ತಿತ್ತು. ತಮ್ಮ ಊಸಿನ ವಿಷಯ ತಮ್ಮಿಬ್ಬರಿಗೆ ಬಿಟ್ಟು ಬೇರೆ ಯಾರಿಗೂ ಗೊತ್ತಾಗಬಾರದೆಂದು ಮಾತನಾಡಿಕೊಂಡರು. ಈಗ ಗುಂಡಪ್ಪ ಮತ್ತು ಗುಂಡಮ್ಮ ದಂಪತಿಗಳು ಅಪನವಾಯುವನ್ನು ಸಮಸ್ಯೆ ಎಂದು ಸ್ವೀಕರಿಸದೆ ಆರಾಮವಾಗಿ ಊಸು ಬಿಟ್ಟು ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ.

ಸೋಮವಾರ, ಜನವರಿ 9, 2017

KiRick PaRtY!!!

ಎಲ್ಲಿ ಹೋದರು ಕಿರಿಕ್ ಪಾರ್ಟಿ ಸಿನಿಮಾ ನೋಡಿದ್ಯಾ ಎಂಬ ಪ್ರಶ್ನೆ ಕೇಳುತ್ತಲೆ ಇದ್ದರು, ಕೊನೆಗೂ ನಿನ್ನೆ ಸಮಯ ಮಾಡಿಕೊಂಡು ಸ್ನೇಹಿತರೊಂದಿಗೆ ಸಿನಿಮಾ ನೋಡಿಕೊಂಡು ಬಂದೆ. ಎಲ್ಲರ ಕಾಲೇಜು ಜೀವನದಲ್ಲಿ ನಡೆಯುವ ಅದ್ಭುತ ಅನುಭವಗಳನ್ನು ರಕ್ಷಿತ್ ಶೆಟ್ಟಿ ಸೆರೆಹಿಡಿದಿದ್ದಾರೆ. ಅದರಲ್ಲೂ Mechanical engineering departmentನಲ್ಲಿ ನಡೆಯುವ ಕ್ಷಣಗಳು ಮೆಲುಕು ಹಾಕುವಂತಿದೆ.
ರಕ್ಷಿತ್ ಶೆಟ್ಟಿಯವರ ಕಾಲೇಜ್ ಬಾಯ್ ಲುಕ್ ತುಂಬಾ ಚೆನ್ನಾಗಿದೆ. ಚಿತ್ರದಲ್ಲಿ 'ಕರ್ಣ' ಎಂಬ ನಾಯಕನ ಹೆಸರು ತುಂಬಾ ವಿಶಿಷ್ಟವಾಗಿದೆ. ಹಾಸ್ಟೆಲ್ ನಲ್ಲಿ ಲುಂಗಿ ಧರಿಸುವ ಮೂಲಕ ಕನ್ನಡ ಸಿನಿಮಾಗಳಿಗೆ ಲುಂಗಿ ಪರಿಚಯಿಸಿದ್ದಾರೆ.
ಚಿತ್ರದ ಮೊದಲಾರ್ದದ ನಾಯಕಿ ರಶ್ಮಿಕ ಮಂದಣ್ಣ 'ಸಾನ್ವಿ' ಎಂಬ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ರಶ್ಮಿಕವರು ಚಿತ್ರದಲ್ಲಿ ಕಾಲೇಜಿನಲ್ಲಿ senior ಮತ್ತು ಕನ್ನಡ ಪಂಡಿತೆಯಾಗಿ ನಟಿಸಿದ್ದಾರೆ. ಕನ್ನಡ ಪಂಡಿತೆಯಾದರು ಚಿತ್ರದಲ್ಲಿ englishನಲ್ಲಿ ಮಾತನಾಡುವುದೆ ಹೆಚ್ಚು. ಕನ್ನಡದ ಸ್ಪಷ್ಟತೆ ಕಡಿಮೆ ಇತ್ತು. ಬೇರೆ ಯಾರದರು ಕಂಠದಾನ ಮಾಡಿದ್ದರೆ ಚೆನ್ನಾಗಿತ್ತು. ರಶ್ಮಿಕರಿಗೆ 3Idiots ಸಿನಿಮಾದಲ್ಲಿ ಕರಿನಾ ಕಪೂರ್ ತರಹ ಲುಕ್ ನೀಡಲಾಗಿದೆ.
Seniorsಗಳ ಗೆಟಪ್ ಗಳು ವಿಶಿಷ್ಟವಾಗಿದೆ, ಇಲ್ಲಿಯವರೆಗೆ ಕನ್ನಡ ಸಿನಿಮಾಗಳಲ್ಲಿ ಈ ರೀತಿ ಪ್ರಯತ್ನಿಸಿಲ್ಲ ಎಂದನಿಸುತದೆ.
ಚಿತ್ರದಲ್ಲಿ ಹಾಸ್ಯಕ್ಕೆ ತುಂಬಾ ಒತ್ತು ನೀಡಲಾಗಿದೆ. ಚಿತ್ರದುದ್ದಕ್ಕೂ ಪಂಚಿಂಗ್ ಡೈಲಾಗ್ ಗಳು ಮುಂದುವರೆಯುತ್ತದೆ. ಈ ಹಾಸ್ಯಗಳು ಪ್ರೇಕ್ಷಕರನ್ನು ಇನ್ನೂ ಸಿನಿಮಾ ಹಾಲ್ ನಲ್ಲಿ ಕುಳಿತಿರುವಂತೆ ಮಾಡುತ್ತದೆ. ಹಾಸ್ಯದೊಂದಿಗೆ ಸಾಗುವುದು ಚಿತ್ರದ ಹಾಡುಗಳು. ಪ್ರತಿಯೊಂದು ಸನ್ನಿವೇಶಕ್ಕೆ ತಕ್ಕಂತೆ ಹಾಡುಗಳ ಸಾಹಿತ್ಯ ಮೂಡಿಬಂದಿದೆ. ಚಿತ್ರದ ಹಿನ್ನೆಲೆ ಸಂಗೀತವಂತು unique ಆಗಿದೆ.
ಚಿತ್ರದಲ್ಲಿ ಪ್ರೇಕ್ಷಕ ಭಾವುಕನಾಗುವ ಕೆಲವು  ದೃಶ್ಯಗಳು ಕೂಡ ಇದೆ.
ಕಾಲೇಜಿನಲ್ಲಿ ನಡೆಯುವ Seniors Vs Juniorsಗಳ ಜಗಳಗಳನ್ನು ಅದ್ಭುತವಾಗಿ ಚಿತ್ರಿಕರಿಸಲಾಗಿದೆ.
ಇನ್ನು ಚಿತ್ರದಲ್ಲಿ Vintage ಕಾರು, bajaj chethak ಸ್ಕೂಟರ್, ಬುಲೆಟ್ ಬೈಕಿನಲ್ಲಿ long drive ಈಗಿನ ಯುವಜನತೆಯನ್ನು ಸೆಳೆಯುತ್ತದೆ. Engineering ಕಾಲೇಜಿನಲ್ಲಿ ನಡೆಯುವ ragging, election, ladies hostelಗೆ ಹೋಗುವುದು, ಉತ್ತರ ಪತ್ರಿಕೆ ಕದಿಯುವುದು, project work ಹಣಕೊಟ್ಟು ಮಾಡಿಸುವುದು, farewellಗಳು, ಹೀಗೆ ಇನ್ನಿತರ ಸಂಗತಿಗಳನ್ನು ಚಿತ್ರದಲ್ಲಿ ಹೇಳಲು ಪ್ರಯತ್ನಿಸಿದ್ದಾರೆ. ಹಾಸದ ಮಲ್ನಾಡ್ ಕಾಲೇಜು campusನಲ್ಲಿ ಚಿತ್ರೆಕರಿಸಿದ್ದು ಕಾಲೇಜನ್ನು ಚೆನ್ನಾಗಿ ತೋರಿಸಿದ್ದಾರೆ.
ಈ ಚಿತ್ರದಲ್ಲಿ Mechanical engg deptನಲ್ಲಿರುವ professorನಂತೆ ಎಲ್ಲಾ ಕಾಲೇಜ್ ಗಳ Mechanical deptನಲ್ಲಿ ಇಂತಹ ಒಬ್ಬ professor ಇರುತ್ತಾರೆ ಎಂಬುವುದು ನನ್ನ ಅಭಿಪ್ರಾಯ.
ಕೆಲವು ದೃಶ್ಯಗಳಲ್ಲಿ ಚಿತ್ರಕ್ಕೂ ಸನ್ನಿವೇಶಕ್ಕೂ ಸಂಬಂಧವೆ ಇಲ್ಲ ಎಂದನಿಸುತ್ತದೆ. ಚಿತ್ರದ ಇನ್ನೊಬ್ಬ ನಟಿ ಸಂಯುಕ್ತ ಹೆಗ್ಡೆ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಿರ್ದೇಶಕರ ಶ್ರಮ ಎದ್ದು ಕಾಣುತ್ತದೆ. ಚಿತ್ರದಲ್ಲಿ ಕೆಲವು ಸನ್ನಿವೇಶಗಳು ಹಿಂದಿಯ 3idiots, ಮಲಯಾಳಂನ Premam ಮತ್ತು Bangalore days ಚಿತ್ರಗಳಿಗೆ ಹೋಲಿಕೆಯಾಗುತ್ತದೆ.
ಇದೆಲ್ಲದರ ನಡುವೆ "ಕಿರಿಕ್ ಪಾರ್ಟಿ" ಒಂದು ಅದ್ಭುತ ಚಿತ್ರ. ಒಮ್ಮೆಯಾದರು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಬಹುದಾದ ಚಲನಚಿತ್ರ.

ಸೋಮವಾರ, ಡಿಸೆಂಬರ್ 26, 2016

Demonetisation

ಒಬ್ಬ ವಿದೇಶಿ ಪ್ರವಾಸಕ್ಕೆಂದು ಭಾರತಕ್ಕೆ ಬಂದಿದ್ದ. ಅವನು ಬಂದಿದ್ದು demonetisation ಆಗುವ ಮೊದಲು, ಅವನು ಭಾರತಕ್ಕೆ land ಆದ ಮೇಲೆ airportನಲ್ಲಿ currency ಬದಲಾಯಿಸಿಕೊಂಡಿದ್ದ. So ಅವನ ಬಳಿ 500 ಮತ್ತು 1000 ರೂಪಾಯಿ ನೋಟುಗಳು ಮಾತ್ರ ಇದ್ದವು.
ಅವನು ಭಾರತ ಪ್ರವಾಸದಲ್ಲಿ ಕೇರಳದ ಮನ್ನಾರ್ ತಲುಪಿದ್ದ. ಬೆಳಿಗ್ಗೆ ಎದ್ದು breakfast ಮಾಡೋಣವೆಂದು hotelಗೆ ಹೋದಾಗ 100 ರೂಪಾಯಿ ನೋಟು ಮಾತ್ರ ತೆಗೆದುಕೊಳ್ಳೋದು ಎಂದು waiter ಹೇಳಿದ, ಅವನ ಬಳಿ 100 ರೂಪಾಯಿ ನೋಟುಗಳು ಇರಲಿಲ್ಲ ಆದ್ದರಿಂದ ಬೇರೆ ಹೋಟೆಲ್ಗೆ ಹೋಗಿ ತಿಂಡಿ ತಿನ್ನೋಣವೆಂದು ಅಲ್ಲಿಂದ ಬೇರೆ hotelಗೆ ನಡೆದ. ಅಲ್ಲಿ ಹೋದಾಗಲು waiter ಇದನ್ನೇ ಹೇಳುತ್ತಿದ್ದಾನೆ. ಅವನಿಗೆ ಆಶ್ಚರ್ಯವಾಗಿತ್ತು. ಏಕೆ ಹೀಗೆ ಎಂದು hotel manager  ಬಳಿ  ವಿಚಾರಿಸಿದಾಗ demonetisationನ ಬಗ್ಗೆ ಅವನಿಗೆ ತಿಳಿಯಿತು. ಎರಡು ದಿನ ಊಟ ಇಲ್ಲದೆ ಕಂಗಾಲಾಗಿದ್ದ. ಮೂರನೆ ದಿನ ಒಂದು ಚಿಕ್ಕ ಹೋಟೆಲ್ಗೆ ಹೋಗುತ್ತಾನೆ, ಅಲ್ಲಿಯೂ ಕೂಡ 100 ರೂಪಾಯಿ ನೋಟ್ ಮಾತ್ರ ತೆಗೆದುಕೊಳ್ಳುವುದು ಎಂದು ಹೇಳುತ್ತಾರೆ, ಸರಿ ಎಂದು ಹೇಳಿ ತನಗೆ ಬೇಕಾದಷ್ಟು order ಮಾಡಿ ಹೊಟ್ಟೆ ತುಂಬುವಷ್ಟು ತಿಂದು ಓಡಿ ಹೋಗುತ್ತಾನೆ. ಮನ್ನಾರ್ ಚಿಕ್ಕ place  ಆದ ಕಾರಣ  ಅವನ ನೋಟು ಬದಲಾಯಿಸಲು ಅವನಿಗೆ ಬಹಳ ಕಷ್ಟವಾಯಿತು. ಒಂದು ತಿಂಗಳು ಭಾರತ ಪ್ರವಾಸ ಮಾಡಬೇಕೆಂದು ಬಂದಿದ್ದ ವಿದೇಶಿಗೆ ನಮ್ಮ ದೇಶದ ಬಗ್ಗೆ  ಏನನಿಸಿದ್ದಿರಬಹುದು ಕೊನೆಗೆ ಯಾರದೋ ಸಹಾಯ ಪಡೆದು  ನೋಟು ಬದಲಾಯಿಸಿಕೊಂಡು airport ತಲುಪಿ ತನ್ನ ದೇಶಕ್ಕೆ ಮರಳಿದನಂತೆ.
demonetisationನ ವಿರೋದಿಗಳು ಈ ರೀತಿಯ ಕಥೆ ಹೇಳಿ ಸಾಮಾನ್ಯ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಜನರು ನೋಟ್ ಇಲ್ಲದೇ ಬದುಕಲು ಅಭ್ಯಾಸ ಮಾಡಿಕೊಂಡಿದ್ದಾರೆ. ಎಲ್ಲಾ ಚಿಕ್ಕ ಅಂಗಡಿಗಳಲ್ಲೂ  paytmನಂತ app ಉಪಯೋಗಿಸುತ್ತಿದ್ದಾರೆ ಇನ್ನೆನೂ ಐದೇ ದಿನದಲ್ಲಿ ನೋಟ್ exchange ಬಂದ್ ಆಗಲಿದೆ. ಕಪ್ಪು ಕುಳಗಳಿಗೆ ಹಾರ್ಟ್ ಎಟಾಕ್ ಆಗೋದು ಬಾಕಿ ಇದೆ.
#Support_digital_India
#Support_PM_Narendra_modiji
#Fight_against_corruption
#Fight _against_black_money

ಸೋಮವಾರ, ನವೆಂಬರ್ 14, 2016

ನಿಮ್ ಹತ್ರ 500 ರೂಪಾಯಿಗೆ change ಇದ್ರೆ ಕೊಡ್ತೀರಾ???

   ಇವತ್ತು hair cut ಮಾಡ್ಸೋಣಂತ ಸಲೂನ್ಗೆ ಹೋಗಿದ್ದೆ, ಅವನು change ಇದ್ರೆ ಮಾತ್ರ hair cut ಮಾಡೋದು ಅಂತನೆ!! ಅಜ್ಜಿ ಪುಣ್ಯಕ್ಕೆ  ನನ್ನತ್ರ change ಇತ್ತು, so ಬಚವಾದೆ. Phoneಗೆ reacharge ಮಾಡ್ಸಕ್ ಹೋದಗ್ಲು same problem repeat!!!
   Bike serviceಗೆ ಕೊಡೋಣಂತ ಮೊನ್ನೆ ಬೆಳಿಗ್ಗೆ showroom ಹೋಗಿದ್ದೆ. ಹೇಗೂ money problem ಮೊನ್ನೆ  8ನೇ ತಾರಿಕ್ನಿಂದ ಶುರುವಾಗಿದ್ಯಲ್ಲ so ಮೊದ್ಲು ನಾನು receptionನತ್ರ ಕೇಳಿದ್ದು card accept ಮಾಡ್ತಿರಾ ಅಂತ? ಅದ್ಕ್ ಅವ್ನು ಇಲ್ಲ ಸಾರ್ machine ರೆಡಿ ಮಾಡಿಸ್ತಿವಿ ನಾಳೆ ಬನ್ನಿ ಅನ್ನೋದೆ!!!
   ಹೀಗೆ  bikeನಲ್ಲಿ ನಿನ್ನೆ ಹೋಗ್ತ ಇದ್ದಗ fuel  reserveಗೆ ಬಂದಿತ್ತು, ಪುಣ್ಯ ಮೊದಲೆ ಗೊತ್ತಾಯಿತು, ಯಾವಗ್ಲೂ fuel dry ಆದ್ಮೆಲೆ petrol  bunkವರೆಗೆ ತಳ್ಕೊಂಡು ಹೋಗಿ ಅಭ್ಯಾಸ ನೋಡಿ!! ಹಾಗಾಗಿ ಹೇಳ್ದೆ.
Petrol reserveಗೆ ಬಂದಿದೆ? ಕೈಯಲ್ಲಿ change ಇಲ್ಲ ,card ಬೇರೆ ತಕೊಂಡ್ ಹೋಗಿಲ್ಲ, ನನ್ನತ್ರ ಇದ್ದಿದ್ದು ಮೊನ್ನೆ 8ನೇ ತಾರಿಕಿಂದ ಹಳೆದಾಯಿತಲ್ವ ಅದೇ 500 ರೂಪಾಯಿ. ಕೆಲವು petrol bunkವ್ರು cash ತಗೋಳ್ತ ಇಲ್ಲ ಅಂತ ಗೊತ್ತಿತ್ತು, ಹಾಗಗಿ ಮೊದ್ಲೆ cash ತಗೋತಿರಾಂತ ಕೇಳ್ದೇ??? ಅವ್ನು ತಗೋತಿವಿ but 500ಗೆ change ಇಲ್ಲ ಅಂತಾನೆ!! ಸರಿ ಆಯ್ತು 500 ರೂಪಾಯಿಗೆ ಹಾಕು ಅಂತ ಬೇಜಾರಲ್ಲಿ ಹೇಳ್ದೆ. ಪಾಪ ಅವ್ನಿಗೆ ನನ್ನ ನೋಡಿ ಕರುಣೆ ಉಕ್ಕಿ ಬಂದು 350rsಗೆ petrol ಹಾಕಿ ಚೇಂಜೂ ಕೊಟ್ಟ, ನಾನು ಅವ್ನಿಗೆ ಒಂದು thanks ಹೇಳ್ಬಿಟ್ಟು ಹೊರಟೆ.
ಸುಮಾರ್ ಜನ್ರ cardಲ್ಲಿ cash ಇದೆ but ಒಂದ್ tea ಕುಡಿಯೋಕೆ card use ಆಗಲ್ವೆ.. ಹಂಗಾಗಿ ಸ್ವಲ್ಪ ದಿನಕ್ಕೆ ಜನ್ರತ್ರ ದುಡ್ಡಿದ್ರು ಭಿಕರಿನೆ ಬಿಡಿ.
ಕ್ಯೂ ನಿಲ್ಲೋದು ನನ್ಗೆ common ಆಗ್ಬಿಟಿದ್ದೆ ಕಾಲೇಜಲ್ಲಿ  fees ಕಟ್ಟೋಕೆ, ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯೋಕೆ, film thetreಲ್ಲಿ ticket ತಗೊಳೋಕೆ ಹೀಗೆ ಅನೇಕ ಸಲ. ನೋಟ್ ಬ್ಯಾನ್ ಆದ್ಮಲೆ ಕ್ಯೂ ನಿತ್ಕೊಳ್ದೆರೂರೆಲ್ಲಾ ನಿತ್ಕೊಂಬಿಟ್ರು ನೋಡಿ ಅದೇ ನನ್ಗೆ ಖುಷಿ ಆಗಿದ್ದು.
ದುಡ್ಡೆ ದೊಡ್ಡಪ್ಪ ಅಂತ ನಂಬಿದ್ದವ್ರುದ್ದು ಚಳಿ ಬಿಟ್ಟೋಗಿದೆ. ಈಗ ನಮ್ google search engineನಲ್ಲಿ ಹೆಚ್ಚು ಸರ್ಚ್ ಆಗ್ತಿರೊ ವಿಷ್ಯ ಏನ್ ಗೊತ್ತ "How to convert black money into white" ಈ ವಿಷ್ಯ ಕೇಳಿ ನನ್ಗೆ ನಗೂನೇ ತಡಿಯೋಕೆ ಆಗ್ತಿಲ್ಲಾ.
"8ನೇ ತಾರಿಕ್ನಂದು ಮೊದಲ ಸಲ ಎಲ್ಲಾ ಬಡವ್ರು ಮಲಗಿದ್ರು, ಆದರೆ ಶ್ರೀಮಂತರು ನಿದ್ದೆ ಮಾಡಲು ನಿದ್ರೆ ಮಾತ್ರೆ ಮೊರೆ ಹೋದ್ರು" ಅಂತ ಸ್ವತಃ ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಇವತ್ತು ಬೆಳಗಾವಿಯಲ್ಲಿ ತಮ್ಮ ಭಾಷಣದಲ್ಲಿ ಹೇಳಿದ್ರು. ಎಷ್ಟೇ ಕಷ್ಟ ಆದ್ರೂ ಕೆಲವು ದಿನ ಅಷ್ಟೇ ಬಿಡಿ, ಎಲ್ಲಾ ಮಹಾ ಕಳ್ಳರು ತಮ್ಮ ಆಟ ನಿಲ್ಲಿಸೋ time ಬಂದಿದೆ. ಮುಂದೆ ನಮ್ಮ ದೇಶದಲ್ಲಿ ಏನೋ ಒಂದು ಬದಲಾವಣೆ ಬಂದೆ ಬರುತ್ತೆ ಅನ್ನೊ ನಂಬಿಕೆ.

ಶನಿವಾರ, ನವೆಂಬರ್ 5, 2016

ಅನ್ನಧಾತೋ ಸುಖೀಭವ|||

ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ, ಎಂಬ ಗಾದೆ ಕೇಳಿರುತ್ತಿರಿ ಹಾಗೆಯೇ ಅತಿಯಾದರೆ ಅಮೃತವು ವಿಷ ಎಂಬ ಗಾದೆ ಕೂಡ ಕೇಳಿರುತ್ತಿರಿ. ಆದ್ದರಿಂದ ನಮ್ಮ ಹೊಟ್ಟೆ ತುಂಬುವಷ್ಟು ಊಟ ಮಾಡಿ ಉಳಿದಿದ್ದರೆ ಹಾಳು ಮಾಡದೆ ಯಾರದರು ಹತ್ತಿರದಲ್ಲಿ ಬಡವರಿದ್ದರೆ ಅವರಿಗೆ ದಾನ ಮಾಡಿ ಪುಣ್ಯ ಸಂಪಾದನೆ ಮಾಡಬಹುದು. "ಎಲ್ಲಾ ರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ" ಎಂದು ದಾಸರು ಹೇಳಿದ್ದಾರೆ. ಮನುಷ್ಯನಿಗೆ ಅನಿವಾರ್ಯ ಮತ್ತು ಅಗತ್ಯ ವಾಗಿರುವುದು ಆಹಾರ ಮತ್ತು ಬಟ್ಟೆ. ಇದಕ್ಕಾಗಿಯೇ ಮನುಷ್ಯರಾದ ನಾವು ಕೆಲಸ ಮಾಡಿ ಹಣ ಸಂಪಾದನೆ ಮಾಡುತ್ತಿರುವುದು.
"ತುತ್ತು ಅನ್ನ ತಿನ್ನೋಕೆ... ಬೊಗಸೆ ನೀರು ಕುಡಿಯೋಕೆ... ತುಂಡು ಬಟ್ಟೆ ಸಾಕು ನನ್ನ ಮಾನ  ಮುಚ್ಚೋಕೆ.. ಅಂಗೈಯಗಲ ಜಾಗ ಸಾಕು ಹಾಯಾಗಿರೋಕೆ..!!" ಹೀಗೆ ಹಾಡಿದವರು ನಮ್ಮ ಸಾಹಸ ಸಿಂಹ ವಿಷ್ಣುವರ್ಧನ್. ಮೊನ್ನೆ ಗ್ರಾಫಿಕ್ಸ್ ನಲ್ಲಿ ವಿಷ್ಣು ಅಭಿನಯಿಸಿದ ನಾಗರಹಾವು ಚಿತ್ರ ಬಿಡುಗಡೆಯಾಯಿತು. ಬಿಡುಗಡೆ ದಿನ ಬೆಂಗಳೂರಿನ ಭೂಮಿಕ ಥಿಯೇಟರ್ ಬಳಿ ವಿಷ್ಣು ಅಭಿಮಾನಿಗಳು ಅನ್ನದಾನ ಹಮ್ಮಿಕೊಂಡಿದ್ದರು. ಒಬ್ಬ ಮೇರುನಟ, ಕರ್ನಾಟಕ ಚಲನಚಿತ್ರಗಳ ದಂತಕಥೆ, ನಮ್ಮ ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಅನ್ನದಾನ ಮಾಡಿದ ಅಭಿಮಾನಿಗಳಿಗೆ ನಿಜಕ್ಕೂ ಒಂದು ಸೆಲ್ಯೂಟ್.
ಮನುಷ್ಯ ತಿನ್ನುವುದಕ್ಕಾಗಿ ಬದುಕಬಾರದು, ಆದರೆ ಬದುಕುವುದಕ್ಕಾಗಿ ತಿನ್ನಬೇಕು.

ಭಾರತೀಯ ಸಂಸ್ಕೃತಿಯಲ್ಲಿ ಅನ್ನದಾನಕ್ಕೆ ಬಹಳ ಮಹತ್ವವಿದೆ. ಶ್ರೀ ಸತ್ಯನಾರಾಯಣ ಸ್ವಾಮಿ ವ್ರತ ಕಥೆಯಲ್ಲಿ ಅನ್ನದಾನ ಮಾಡಬೇಕೆಂಬ ಉಲ್ಲೇಖವಿದೆ. ಯಾವುದೇ ಶುಭಕಾರ್ಯಕ್ರಮಗಳಲ್ಲಿ ಅನ್ನದಾನಕ್ಕೆ ಪ್ರಾಶಸ್ತ್ಯ ನೀಡುತ್ತೆವೆ.
ಅನ್ನದಾನಕ್ಕೂ ಧಾರ್ಮಿಕ ಕ್ಷೇತ್ರಗಳಿಗೂ ಒಂದು ಬಿಡಿಸಲಾಗದ ಸಂಬಂಧವಿದೆ. ಹಸಿದಾಗ ಲೋಕವೆ ಕಾಣುವುದಿಲ್ಲ ಇನ್ನು ದೇವರು ಕಾಣುತ್ತಾನೆಯೇ. ಆದ್ದರಿಂದಲೇ ದೇವಸ್ಥಾನಗಳಲ್ಲಿ ಅನ್ನದಾನವನ್ನು ಏರ್ಪಡಿಸಿರಬಹುದು.
ಅನ್ನಪೂರ್ಣೆ ಸದಾ ಪೂರ್ಣೆ|
ಶಂಕರೇ ಪ್ರಾಣವಲ್ಲಭೆ||
ಜ್ಞಾನ ವೈರಾಗ್ಯ ಸಿದ್ಯಾಥಂ|
ಭಿಕ್ಷಂ ದೇಹಿಚ ಪಾರ್ವತಿ||
ಈ ಸಂಸ್ಕೃತ ಶ್ಲೋಕ ಸಾಮಾನ್ಯವಾಗಿ ಅನ್ನದಾನ ನಡೆಯುವ ಎಲ್ಲಾ ಕ್ಷೇತ್ರಗಳಲ್ಲಿ ಬರೆದಿರುತ್ತಾರೆ. ಕರ್ನಾಟಕದ  ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಅನ್ನ ಸಂತರ್ಪಣೆ ನಡೆಯುತ್ತಿಲಿದೆ. ಹೊರನಾಡು ಶ್ರೀ ಅನ್ನಪೂರ್ಣೆಶ್ವರಿ ಕ್ಷೇತ್ರ ಅನ್ನದಾನಕ್ಕೆ ಪ್ರಸಿದ್ಧಿ ಹೊಂದಿದೆ, ಇಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತರು ಅನ್ನದಾನದಲ್ಲಿ ಪಾಲ್ಗೊಳ್ಳುತ್ತಾರೆ. ನನಗೆ ಈ ಕ್ಷೇತ್ರದಲ್ಲಿ ಊಟ ಮಾಡಿದಾಗ ಅಮೃತವನ್ನೇ ಸೇವಿಸಿದನೇನೋ ಎಂಬ ಭಾವ ಬಂದಿತ್ತು. ಇಲ್ಲಿಯ ಊಟದ ರುಚಿಯನ್ನು ಯಾವ ಪದಗಳಲ್ಲಿ ಹೇಳಲು ಅಸಾಧ್ಯ. ಇದಕ್ಕೆಲ್ಲ ತಾಯಿ ಅನ್ನಪೂರ್ಣೇಶ್ವರಿಯ ಕೃಪೆಯೇ ಕಾರಣ ಎಂದರೆ ತಪ್ಪಾಗಲಾರದು.
ಹೆಸರಲ್ಲೇ  ಧರ್ಮ ಇರುವುದು ಶ್ರೀ ಕ್ಷೇತ್ರ ಧರ್ಮಸ್ಥಳ,  ಇಲ್ಲಿ ಊಟ ಮಾಡಲು ಶ್ರೀ ಮಂಜುನಾಥ ಸ್ವಾಮಿಯ ಕೃಪೆವೊಂದಿದ್ದರೆ ಸಾಕು. ಶ್ರೀ ಕ್ಷೇತ್ರದಲ್ಲಿ ಸರಿ ಸುಮಾರು 50 ಸಾವಿರ ಮಂದಿ  ಪ್ರತಿ ದಿನ ಊಟ ಮಾಡುತ್ತಾರೆ. ಭಾರತದ ಬೃಹತ್ ಅಡುಗೆ ಕೋಣೆಗಳ ಪಟ್ಟಿಯಲ್ಲಿ ಧರ್ಮಸ್ಥಳದ ಅಡುಗೆಕೋಣೆ ಕೂಡ ಸೇರ್ಪಡೆಗೋಂಡಿದೆ. ಇನ್ನೊಂದು ಕುತೂಹಲಕಾರಿ ವಿಷಯವೇನೆಂದರೆ ಇಲ್ಲಿ ಅಡುಗೆ ಮಾಡಲು ಜೈವಿಕ ಇಂಧನವನ್ನು ಬಳಸುತ್ತಾರೆ. ನ್ಯಾಷನಲ್ ಜಿಯೋಗ್ರಾಫಿಕ್ ಛಾನಲ್ ನಲ್ಲಿ ಜೂನ್ 22 ರಂದು "ಮೆಗಾ ಕಿಚನ್" ಎಂಬ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಅಡುಗೆಕೋಣೆ ತೋರಿಸಿದ್ದು ಬಹಳ ಸಂತಸದ ವಿಚಾರ.
ದಕ್ಷಿಣ ಕನ್ನಡ ಜಿಲ್ಲೆ ಧಾರ್ಮಿಕ ಕ್ಷೇತ್ರಗಳಿಗೆ ಹೆಸರುವಾಸಿ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಸರಾಸರಿ ಐದು ಸಾವಿರದಿಂದ ಹತ್ತು ಸಾವಿರ ಮಂದಿಗೆ ಅನ್ನದಾಸೋಹ ನಡೆಸಲಾಗುತ್ತಿದೆ. ಶ್ರೀ ಕ್ಷೇತ್ರದಲ್ಲಿ ತಯಾರಿಸುವ ಹಾಲಿನ ಪರಮಾನ್ನದ (ಪಾಯಸ) ರುಚಿ ಬಾಯಲ್ಲಿ ನೀರೂರಿಸುತ್ತದೆ. ಈ ಕ್ಷೇತ್ರದಲ್ಲಿ ಭಕ್ತಾದಿಗಳಿಗಲ್ಲದೆ 3500 ಶಾಲ ಮಕ್ಕಳಿಗೆ ಅನ್ನ ಸಂತರ್ಪಣೆ ನಡೆಯುತ್ತಿದೆ. ಇನ್ನೊಂದು ವಿಶೇಷ ಏನೆಂದರೆ ಕೈಸ್ತ ಸಂಸ್ಥೆಗಳು ನಡೆಸುತ್ತಿರುವ ವಿಶೇಷ ಶಾಲೆಗಳ ಮಕ್ಕಳಿಗೂ ಅನ್ನದಾನ ಮಾಡುತ್ತಿರುವುದು ಸಾಮರಸ್ಯದ ವಿಷಯವಾಗಿದೆ. ವಾರ್ಷಿಕವಾಗಿ 2 ರಿಂದ 3 ಕೋಟಿ ಅನ್ನದಾನಕ್ಕಾಗಿ ಶ್ರೀ ಕ್ಷೇತ್ರ ವೆಚ್ಚ ಮಾಡುತ್ತಿದೆ. ಇಲ್ಲಿ ಅನ್ನದಾನ ಮಾಡಲು ಇಚ್ಛಿಸುವ ಭಕ್ತರಿಗೆ 80ಜಿ ವಿನಾಯಿತಿ ಇರುತ್ತದೆ.
ಉಳಿದಂತೆ ಉಡುಪಿ ಶ್ರೀಕೃಷ್ಣ ಮಠ, ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ, ಶೃಂಗೇರಿ ಶಾರದಾ ಪೀಠ, ಮುಂತಾದ ಎಲ್ಲಾ ಧಾರ್ಮಿಕ ಕ್ಷೇತ್ರಗಳಲ್ಲಿ ಅನ್ನ ದಾಸೋಹ ನಡೆಯುತ್ತಲಿದೆ.
ಕೊಡಗಿನ ಭಾಗಮಂಡಲದ ತಲಕಾವೇರಿ ಕ್ಷೇತ್ರ, ಪಾಡಿ ಇಗ್ಗುತಪ್ಪ ಕ್ಷೇತ್ರ ಮತ್ತು ಬಾಡಗರಕೇರಿ ಶ್ರೀ ಮೃತ್ಯುಂಜಯ ಕ್ಷೇತ್ರದಲ್ಲಿ ದಿನಂಪ್ರತಿ ಅನ್ನ ಸಂತರ್ಪಣೆ ನಡೆಯುತ್ತಿದೆ. ಗೋಣಿಕೊಪ್ಪದ ಶ್ರೀ ಉಮಾಮಹೇಶ್ವರಿ ದೇವಸ್ಥಾನಲ್ಲಿ ಸುಬ್ರಮಣ್ಯ ಷಷ್ಠಿ, ಯುಗಾದಿ, ಶಿವರಾತ್ರಿ, ಗಣೇಶ ಚತುರ್ಥಿ, ದಸರಾ ಮುಂತಾದ ವಿಶೇಷ ದಿನಗಳಲ್ಲಿ ಮತ್ತು ಪ್ರತಿ ತಿಂಗಳ ಹುಣ್ಣಿಮೆಯಂದು ನಡೆಯುವ ಸಾಮೂಹಿಕ ಸತ್ಯನಾರಾಯಣ ಪೂಜೆಯ ಸಂದರ್ಭಲ್ಲಿ ಅನ್ನ ದಾನ ನಡೆಸುತ್ತಾರೆ.
ನಮ್ಮ ದೇಶದ ಬೆನ್ನೆಲುಬು ಎಂದು ಕರೆಸುಕೊಳ್ಳುವ ರೈತರನ್ನು ನಾವು ಅನ್ನದಾತ ಎಂದು ಕರೆಯುತ್ತೇವೆ. ಆದರೆ ಆ ಅನ್ನದಾತ ಬರಗಾಲ ಎಂಬಿತ್ಯಾದಿ ಸಂಕಷ್ಟಗಳಿಗೆ ತುತ್ತಾಗುತ್ತಿದ್ದಾನೆ. ಸರ್ಕಾರ ರೈತರ ಬಗೆಗಿನ ವಿಚಾರವನ್ನು ಹಗುರವಾಗಿಯೇ ತೆಗೆದುಕೊಳ್ಳುತ್ತಿದೆ. ರಾಜಕೀಯ ಸಮಾವೇಶಗಳಲ್ಲಿ ಭಕ್ಷ್ಯ ಬೋಜನಗಳನ್ನು ಚೆಲ್ಲಾಡುತ್ತಾರೆ. ಮೊನ್ನೆ ಮೈಸೂರು ದಸರಾ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ವಿಐಪಿಗಳು ಅಲ್ಲಿ ಚೆಲ್ಲಾಡಿದ ಭಕ್ಷ್ಯಗಳನ್ನು ನೋಡಿದಾಗ ಇವರೆನೆಲ್ಲ ವಿಐಪಿಗಳು ಎಂದು ಕರೆದವರು ಯಾರು ಎಂದನಿಸುತ್ತದೆ.
ನಮ್ಮ ದೇಶದಲ್ಲಿ ಒಬ್ಬ ಬಡವ ಊಟ ಮಾಡುವುದಕ್ಕು ಮತ್ತು ಒಬ್ಬ ಶ್ರೀಮಂತ ಊಟ ಮಾಡುವುದಕ್ಕು ವ್ಯತ್ಯಾಸ ಇರುವುದು ದುರದೃಷ್ಟ. ಶ್ರೀಮಂತನ ಊಟದ ತಟ್ಟೆಯಲ್ಲಿ ಯಾವಗಲು ಅನ್ನ ವ್ಯರ್ಥವಾಗುತ್ತದೆ. ಶ್ರೀಮಂತರ ಆಡಂಬರದ ಭೋಜನ ಕೂಟಗಳಲ್ಲಿ ಬಿಸಾಡುವ ಅನ್ನದ ಪ್ರಮಾಣಗಳಲ್ಲಿ ಬಡವರು ಹಲವಾರು ದಿನಗಳು  ಊಟ ಮಾಡಬಹುದು.
ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ತಮ್ಮ ಹೆಸರು ಹೇಳದೆ ಅನ್ನದಾನ ಮಾಡುತ್ತಿರುವವರು ನಮ್ಮ ನಡುವೆ ಇದ್ದಾರೆ. ಹಲವು ಸಂಘ ಸಂಸ್ಥೆಗಳು, ಟ್ರಸ್ಟ್ ಗಳು, ವಿಶೇಷ ಮಕ್ಕಳ ಶಾಲೆಗಳ ಆಡಳಿತ ಮಂಡಳಿಯವರು ತಮ್ಮ ಜೀವನ್ನೆ ಸಮಾಜದ ಏಳಿಗೆಗಾಗಿ ಮುಡುಪಾಗಿಟ್ಟಿದ್ದಾರೆ. ಇಂತಹ ಸಮಾಜ ಸೇವಕರು ನಮ್ಮ ದೇಶದ ಅಮೂಲ್ಯ ರತ್ನಗಳು. ಇಂತಹ ರತ್ನಗಳಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡುವುದು ಒಳ್ಳೆಯದು ಎಂಬುವುದು ನನ್ನ ಉದ್ದೇಶ.