ಗುಂಡಪ್ಪ ಮತ್ತು ಗುಂಡಮ್ಮನಿಗೆ ಲವ್ ಆಗಿತ್ತು, ಇಬ್ಬರು ಬೆಂಗಳೂರಿನಲ್ಲಿ ಒಂದೇ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು. ಗುಂಡಪ್ಪ ಗುಂಡಮ್ಮಳನ್ನು ಬೆಂಗಳೂರಿನೆಲ್ಲ ಸುತ್ತಾಡಿಸುತ್ತಿದ್ದ. ಒಮ್ಮೆ ಗುಂಡಮ್ಮಳನ್ನು ಗುಂಡಪ್ಪ ತನ್ನ ಮನೆಗೆ ಕಳೆದುಕೊಂಡು ಹೋಗಿ ಮನೆಯವರಿಗೆಲ್ಲ ಪರಿಚಯ ಮಾಡಿಸಿದ. ಆತನ ಮನೆಯಲ್ಲಿ ಅವನ ತಂದೆ-ತಾಯಿ, ಅಣ್ಣ-ಅತ್ತಿಗೆ ಮತ್ತು ಅಣ್ಣನ ಮಗ ಚಿಂಟು ವಾಸಿಸುತಿದ್ದರು. ಎಲ್ಲರಿಗೂ ಗುಂಡಮ್ಮ ಹಿಡಿಸಿದ್ದಳು.
ಹೀಗೆ ಎಲ್ಲರೂ ಹರಟುತಿದ್ದಾಗ ಗುಂಡಪ್ಪನ ಮಗ ಚಿಂಟು ಜೋರಾಗಿ ಊಸು ಬಿಟ್ಟ. ಆ ತಕ್ಷಣ ಗುಂಡಪ್ಪನಿಗೆ ನಗು ತಡಿಯಲಾಗಲಿಲ್ಲ. ಜೋರಾಗಿ ನಕ್ಕು ಚಿಂಟುನನ್ನು ಮೇಲಕ್ಕೆತ್ತಿ ತಮಾಷೆ ಮಾಡಿದ, ಇದನ್ನು ನೋಡಿದ ಗುಂಡಮ್ಮಳಿಗೆ ತುಬಾ ಭಯವಾಗಿತ್ತು. ಹೊಟ್ಟೆಯಲೆಲ್ಲ ತಳಮಳವಾಗತೊಡಗಿತು. ಭಯದಲ್ಲಿ ಬೆವರ ತೊಡಗಿದಳು. ಇಷ್ಟೆಲ್ಲ ಭಯ ಆತಂಕ ಗುಂಡಮ್ಮಳಿಗೆ ಏಕೆ ಮೂಡಿತ್ತು ಎಂದು ಆಶ್ಚರ್ಯವಾಗಬಹುದು. ಯಾಕೆಂದರೆ ನಾಳೆ ನಾನು ಮದುವೆಯಾಗಿ ಬಂದಾಗ ಎಲ್ಲಾದರು ಊಸು ಬಿಟ್ಟರೆ ತನ್ನ ಗಂಡ ಎಷ್ಟೆಲ್ಲಾ ಆಡಿಕೊಳ್ಳಬಹುದು ಎಂಬ ಆತಂಕ ಅವಳದಾಗಿತ್ತು. ಈ ಭಯ ಆ ತಕ್ಷಣ ನಿವಾರಣೆಯಾಗಲು ವಾಷ್ ರೂಮಿಗೆ ಹೋಗಿ ತನ್ನ ಹೊಟ್ಟೆಯಲ್ಲಿದ್ದ ಊಸನೆಲ್ಲಾ ಹೊರಗೆ ಬಿಟ್ಟಳು. ನಂತರ ಕಾಫಿ ತಿಂಡಿ ತಿಂದು ತನ್ನ ಪಿಜಿಗೆ ತೆರಳಿದಳು.
ಗುಂಡಮ್ಮಳಿಗೆ ಅಪನವಾಯು ಸಮಸ್ಯೆ. ಯಾವಗಲು ಅವಳ ಹೊಟ್ಟೆ ಕೆಟ್ಟು ಹೋಗಿರುತ್ತಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಯಾರಿಗೂ ಗೊತ್ತಗಾದಂತೆ ಹೇಗೆ ಊಸು ಬಿಡಬೇಕು ಎಂಬ ವಿಷಯವನ್ನು ಗೂಗಲ್ ನಲ್ಲಿ ಹುಡುಕಿ ಉತ್ತರ ಕಂಡುಕೊಂಡಿದ್ದಳು. ಗುಂಡಮ್ಮಳಿಗೆ ಅಪನವಾಯು ಪಿತ್ರಾಜಿತ ಆಸ್ಥಿ, ಗುಂಡಮ್ಮಳ ತಾಯಿ ಕಿಟ್ಟಕ್ಕ ಊಸು ಬಿಟ್ಟರೆ ಮೋಟರು ಸೈಕಲ್ ಹೋದಂತೆ ಶಬ್ದವಾಗುತ್ತದೆ, ಇನ್ನು ಅವಳ ತಂದೆ ಕಿಟ್ಟಣ್ಣ ಬಿಟ್ಟರಂತು ಬಾಂಬ್ ಸಿಡಿಯುವಂತ ಶಬ್ದ. ಹೀಗಿರುವಾಗ ಗುಂಡಮ್ಮಳಿಗೆ ಅಪನವಾಯು ಸಮಸ್ಯೆ ಬರದೇ ಇರುತ್ತದೆಯೇ.
ಗುಂಡಪ್ಪ ಮತ್ತು ಗುಂಡಮ್ಮಳ ಮನೆಯಲ್ಲಿ ಮಾತುಕತೆ ಮುಗಿದು ತಮ್ಮ ಕುಟುಂಬ ಸದಸ್ಯರು, ಸ್ನೇಹಿತರ ಸಮ್ಮುಖದಲ್ಲಿ ಅದ್ದೂರಿಯಾಗಿ ಇಬ್ಬರ ವಿವಾಹ ನೆರೆವೇರಿತು. ವಿವಾಹದಲ್ಲೂ ಗುಂಡಮ್ಮಳದ್ದು ಒಂದೇ ಸಮಸ್ಯೆ ಹೇಗೆ ಊಸು ಬಿಡಲಿ ಎಂದು!! ಊಸನ್ನು ಹೊಟ್ಟೆಯಲ್ಲೆ ಹಿಡಿದುಕೊಂಡು ಕಷ್ಟ ಪಡುತ್ತಿದ್ದಳು, ಹೀಗಾದಗ ಹೊಟ್ಟೆಯಿಂದ ಕೆಲವು ಶಬ್ದಗಳು ಬರತೊಡಗಿದವು, ಇದನ್ನು ಗಮನಿಸಿದ ಗುಂಡಪ್ಪ ಏನಾಯಿತು ಎಂದು ಪ್ರಶ್ನಿಸಿದಾಗ ಹಸಿವಿಗೆ ಹೊಟ್ಟೆ ಶಬ್ದ ಮಾಡುತ್ತಿದೆ ಎಂದು ಉತ್ತರಿಸಿದಳು.
ಗುಂಡಮ್ಮಳ ತಂದೆ-ತಾಯಿ ವಿವಾಹದಲ್ಲಿ ರಾಜಾರೋಷವಾಗಿ ಊಸು ಬಿಡುತಿದ್ದರು, ಅವರ ಕುಟುಂಬದವರಿಗೆ ಇವರ ಅಪನವಾಯು ಸಮಸ್ಯೆ ಗೊತ್ತಿದ್ದರಿಂದ ಯಾರು ನಗುತ್ತಿರಲಿಲ್ಲ ಆದರೆ ಗೊತ್ತಿಲ್ಲದವರಿಗೆ ಮದುವೆಯಲ್ಲಿ ಮಾತನಾಡಲು ಬೇರೆ ವಿಷಯ ಬೇಕಾಗಿರಲಿಲ್ಲ. ಇದನ್ನು ಗಮನಿಸುತಿದ್ದ ಗುಂಡಮ್ಮಳಿಗೆ ಸ್ವಲ್ಪ ಅಸಮಾಧಾನವಾಗಿತ್ತು. ತನ್ನ ತಂದೆ-ತಾಯಿಯನ್ನು ಕರೆದು ಜೋರಾಗಿ ಊಸು ಬಿಡಬೇಡಿ ಎಂದು ಎಚ್ಚರಿಸಿದಳು.
ಮದುವೆ ಎಲ್ಲಾ ಮುಗಿದು ಗುಂಡಪ್ಪ-ಗುಂಡಮ್ಮ ಬೆಂಗಳೂರಿನ ಮನೆಯಲ್ಲಿ ಖುಷಿಯಾಗಿ ವಾಸಿಸುತಿದ್ದರು. ಆದರೆ ಗುಂಡಮ್ಮಳಿಗೆ ತನ್ನ ಅಪನವಾಯು ಸಮಸ್ಯೆ ಗಂಡನಿಗೆ ಗೊತ್ತದರೆ ಏನು ಗತಿ ಎಂಬ ಚಿಂತೆ ಕಾಡುತ್ತಲೇ ಇತ್ತು.
ತನ್ನ ಗಂಡ ಗುಂಡಪ್ಪ ಬಾತ್ರೂಮಿಗೆ ಹೋದರೆ ಯಾವಾಗಲು ಬಕೇಟಿಗೆ ನೀರು ಬಿಟ್ಟು ಜೋರಾಗಿ ಶಬ್ದ ಮಾಡುತ್ತಿದ್ದನ್ನು ಗುಂಡಮ್ಮ ಗಮನಿಸಿದ್ದಳು. ಏಕೆ ಇಷ್ಟು ಶಬ್ದ ಮಾಡುತ್ತಾರೆ ಎಂದು ಮನಸ್ಸಿನಲ್ಲಿಯೇ ಯೋಚಿಸುತ್ತಿದ್ದಳು.
ಮನಸ್ಸಿನಲ್ಲಿದ್ದ ಸಂಶಯವನ್ನು ನಿವಾರಿಸಲು ತನ್ನ ಗಂಡನಲ್ಲಿ "ನೀವೂ ಬಾತ್ರೂಮಿಗೆ ಹೋದ ಮೇಲೆ ಜೋರಾಗಿ ಬಕೇಟಿಗೆ ನೀರು ಬಿಟ್ಟು ಶಬ್ದ ಏಕೇ ಮಾಡುತ್ತೀರಿ.??" ಎಂದು ಕೇಳಿಯೇ ಬಿಟ್ಟಳು. ಇದನ್ನು ಕೇಳಿದ ಗುಂಡಪ್ಪನಿಗೆ ಕಸಿವಿಸಿಯಾಯಿತು, ಏನೂ ಹೇಳಲಿ ಎಂದು ಚಡಪಡಿಸಿದನು, ಏಕೆಂದರೆ ಅವನಿಗೂ ಅಪಸವಾಯು ಸಮಸ್ಯೆ ಇತ್ತು. "ನಾನು ಟಾಯ್ಲೆಟ್ ಸೀಟಿನಲ್ಲಿ ಕುಳಿತಾಗ ವಾಯು ಕೂಡ ಹೊರ ಹೋಗುತ್ತದೆ, ಅದರ ಶಬ್ದ ಕೇಳದಿರಲಿ ಎಂದು ಬಕೇಟಿಗೆ ನೀರು ಬಿಟ್ಟು ಶಬ್ದ ಮಾಡುತ್ತೇನೆ." ಎಂದು ಗುಂಡಪ್ಪ ಉತ್ತರಿಸುತ್ತಾನೆ. ಇದನ್ನು ಕೇಳಿದ ಗುಂಡಮ್ಮಳಿಗೆ ನಗು ತಡೆಯಲಾಗುತ್ತಿಲ್ಲ, ಜೊತೆಗೆ ಮನಸ್ಸಿನಲ್ಲಿ ಒಂದು ಸಮಾಧಾನ ಕೂಡ, ಅಬ್ಬಾ ಇನ್ನು ಮುಂದೆ ತಾನು ಗಂಡನ ಮುಂದೆ ಊಸು ಬಿಡಬಹುದು ಎಂಬ ದೈರ್ಯ ಅವಳಲ್ಲಿ ಬಂತು. ಇದಾದ ಕೆಲವು ದಿನಗಳ ನಂತರ ಗುಂಡಮ್ಮ ತನ್ನ ಗಂಡನ ಮುಂದೆಯೇ ಊಸು ಬಟ್ಟಳು, ಗುಂಡಪ್ಪನಿಗೆ ಆಶ್ಚರ್ಯವಾಯಿತು! ತನ್ನ ಹೆಂಡತಿ ಊಸು ಬಿಡುತ್ತಾಳೆ ಎಂದು ಅವನಿಗೆ ಅಂದೇ ಗೊತ್ತಾಗಿದ್ದು. ನಿಜ ಹೇಳಬೇಕೆಂದರೆ ಅವನಿಗೆ ಹುಡುಗಿಯರು ಊಸು ಬಿಡುತ್ತಾರೆ ಎಂಬ ವಿಷಯವೇ ಗೊತ್ತಿರಲಿಲ್ಲವಂತೆ.
ಹೀಗೆ ತಮ್ಮಿಬ್ಬರ ಊಸಿನ ವಿಷಯ ಪರಸ್ಪರ ಗೊತ್ತಾದ ಮೇಲೆ ಇಬ್ಬರು ಖುಷಿಪಟ್ಟರು, ಸಂತೋಷದಿಂದ ನಗುತ್ತ ಜೋರಾಗಿ ಊಸು ಬಿಟ್ಟು ಸಂಭ್ರಮಿಸಿದರು. ಊಸು ಬಡಲೆಂದೇ ಬೆಳಗ್ಗೆ ಜಾಗಿಂಗ್ ಹೋಗಲು ನಿಶ್ಚಯಿಸಿದರು. ಓಡುವಾಗ ವಾಯು ಅದಾಗಿಯೇ ಹೊರ ಬರುತ್ತಿತ್ತು. ತಮ್ಮ ಊಸಿನ ವಿಷಯ ತಮ್ಮಿಬ್ಬರಿಗೆ ಬಿಟ್ಟು ಬೇರೆ ಯಾರಿಗೂ ಗೊತ್ತಾಗಬಾರದೆಂದು ಮಾತನಾಡಿಕೊಂಡರು. ಈಗ ಗುಂಡಪ್ಪ ಮತ್ತು ಗುಂಡಮ್ಮ ದಂಪತಿಗಳು ಅಪನವಾಯುವನ್ನು ಸಮಸ್ಯೆ ಎಂದು ಸ್ವೀಕರಿಸದೆ ಆರಾಮವಾಗಿ ಊಸು ಬಿಟ್ಟು ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ