ಸೋಮವಾರ, ಜನವರಿ 9, 2017

KiRick PaRtY!!!

ಎಲ್ಲಿ ಹೋದರು ಕಿರಿಕ್ ಪಾರ್ಟಿ ಸಿನಿಮಾ ನೋಡಿದ್ಯಾ ಎಂಬ ಪ್ರಶ್ನೆ ಕೇಳುತ್ತಲೆ ಇದ್ದರು, ಕೊನೆಗೂ ನಿನ್ನೆ ಸಮಯ ಮಾಡಿಕೊಂಡು ಸ್ನೇಹಿತರೊಂದಿಗೆ ಸಿನಿಮಾ ನೋಡಿಕೊಂಡು ಬಂದೆ. ಎಲ್ಲರ ಕಾಲೇಜು ಜೀವನದಲ್ಲಿ ನಡೆಯುವ ಅದ್ಭುತ ಅನುಭವಗಳನ್ನು ರಕ್ಷಿತ್ ಶೆಟ್ಟಿ ಸೆರೆಹಿಡಿದಿದ್ದಾರೆ. ಅದರಲ್ಲೂ Mechanical engineering departmentನಲ್ಲಿ ನಡೆಯುವ ಕ್ಷಣಗಳು ಮೆಲುಕು ಹಾಕುವಂತಿದೆ.
ರಕ್ಷಿತ್ ಶೆಟ್ಟಿಯವರ ಕಾಲೇಜ್ ಬಾಯ್ ಲುಕ್ ತುಂಬಾ ಚೆನ್ನಾಗಿದೆ. ಚಿತ್ರದಲ್ಲಿ 'ಕರ್ಣ' ಎಂಬ ನಾಯಕನ ಹೆಸರು ತುಂಬಾ ವಿಶಿಷ್ಟವಾಗಿದೆ. ಹಾಸ್ಟೆಲ್ ನಲ್ಲಿ ಲುಂಗಿ ಧರಿಸುವ ಮೂಲಕ ಕನ್ನಡ ಸಿನಿಮಾಗಳಿಗೆ ಲುಂಗಿ ಪರಿಚಯಿಸಿದ್ದಾರೆ.
ಚಿತ್ರದ ಮೊದಲಾರ್ದದ ನಾಯಕಿ ರಶ್ಮಿಕ ಮಂದಣ್ಣ 'ಸಾನ್ವಿ' ಎಂಬ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ರಶ್ಮಿಕವರು ಚಿತ್ರದಲ್ಲಿ ಕಾಲೇಜಿನಲ್ಲಿ senior ಮತ್ತು ಕನ್ನಡ ಪಂಡಿತೆಯಾಗಿ ನಟಿಸಿದ್ದಾರೆ. ಕನ್ನಡ ಪಂಡಿತೆಯಾದರು ಚಿತ್ರದಲ್ಲಿ englishನಲ್ಲಿ ಮಾತನಾಡುವುದೆ ಹೆಚ್ಚು. ಕನ್ನಡದ ಸ್ಪಷ್ಟತೆ ಕಡಿಮೆ ಇತ್ತು. ಬೇರೆ ಯಾರದರು ಕಂಠದಾನ ಮಾಡಿದ್ದರೆ ಚೆನ್ನಾಗಿತ್ತು. ರಶ್ಮಿಕರಿಗೆ 3Idiots ಸಿನಿಮಾದಲ್ಲಿ ಕರಿನಾ ಕಪೂರ್ ತರಹ ಲುಕ್ ನೀಡಲಾಗಿದೆ.
Seniorsಗಳ ಗೆಟಪ್ ಗಳು ವಿಶಿಷ್ಟವಾಗಿದೆ, ಇಲ್ಲಿಯವರೆಗೆ ಕನ್ನಡ ಸಿನಿಮಾಗಳಲ್ಲಿ ಈ ರೀತಿ ಪ್ರಯತ್ನಿಸಿಲ್ಲ ಎಂದನಿಸುತದೆ.
ಚಿತ್ರದಲ್ಲಿ ಹಾಸ್ಯಕ್ಕೆ ತುಂಬಾ ಒತ್ತು ನೀಡಲಾಗಿದೆ. ಚಿತ್ರದುದ್ದಕ್ಕೂ ಪಂಚಿಂಗ್ ಡೈಲಾಗ್ ಗಳು ಮುಂದುವರೆಯುತ್ತದೆ. ಈ ಹಾಸ್ಯಗಳು ಪ್ರೇಕ್ಷಕರನ್ನು ಇನ್ನೂ ಸಿನಿಮಾ ಹಾಲ್ ನಲ್ಲಿ ಕುಳಿತಿರುವಂತೆ ಮಾಡುತ್ತದೆ. ಹಾಸ್ಯದೊಂದಿಗೆ ಸಾಗುವುದು ಚಿತ್ರದ ಹಾಡುಗಳು. ಪ್ರತಿಯೊಂದು ಸನ್ನಿವೇಶಕ್ಕೆ ತಕ್ಕಂತೆ ಹಾಡುಗಳ ಸಾಹಿತ್ಯ ಮೂಡಿಬಂದಿದೆ. ಚಿತ್ರದ ಹಿನ್ನೆಲೆ ಸಂಗೀತವಂತು unique ಆಗಿದೆ.
ಚಿತ್ರದಲ್ಲಿ ಪ್ರೇಕ್ಷಕ ಭಾವುಕನಾಗುವ ಕೆಲವು  ದೃಶ್ಯಗಳು ಕೂಡ ಇದೆ.
ಕಾಲೇಜಿನಲ್ಲಿ ನಡೆಯುವ Seniors Vs Juniorsಗಳ ಜಗಳಗಳನ್ನು ಅದ್ಭುತವಾಗಿ ಚಿತ್ರಿಕರಿಸಲಾಗಿದೆ.
ಇನ್ನು ಚಿತ್ರದಲ್ಲಿ Vintage ಕಾರು, bajaj chethak ಸ್ಕೂಟರ್, ಬುಲೆಟ್ ಬೈಕಿನಲ್ಲಿ long drive ಈಗಿನ ಯುವಜನತೆಯನ್ನು ಸೆಳೆಯುತ್ತದೆ. Engineering ಕಾಲೇಜಿನಲ್ಲಿ ನಡೆಯುವ ragging, election, ladies hostelಗೆ ಹೋಗುವುದು, ಉತ್ತರ ಪತ್ರಿಕೆ ಕದಿಯುವುದು, project work ಹಣಕೊಟ್ಟು ಮಾಡಿಸುವುದು, farewellಗಳು, ಹೀಗೆ ಇನ್ನಿತರ ಸಂಗತಿಗಳನ್ನು ಚಿತ್ರದಲ್ಲಿ ಹೇಳಲು ಪ್ರಯತ್ನಿಸಿದ್ದಾರೆ. ಹಾಸದ ಮಲ್ನಾಡ್ ಕಾಲೇಜು campusನಲ್ಲಿ ಚಿತ್ರೆಕರಿಸಿದ್ದು ಕಾಲೇಜನ್ನು ಚೆನ್ನಾಗಿ ತೋರಿಸಿದ್ದಾರೆ.
ಈ ಚಿತ್ರದಲ್ಲಿ Mechanical engg deptನಲ್ಲಿರುವ professorನಂತೆ ಎಲ್ಲಾ ಕಾಲೇಜ್ ಗಳ Mechanical deptನಲ್ಲಿ ಇಂತಹ ಒಬ್ಬ professor ಇರುತ್ತಾರೆ ಎಂಬುವುದು ನನ್ನ ಅಭಿಪ್ರಾಯ.
ಕೆಲವು ದೃಶ್ಯಗಳಲ್ಲಿ ಚಿತ್ರಕ್ಕೂ ಸನ್ನಿವೇಶಕ್ಕೂ ಸಂಬಂಧವೆ ಇಲ್ಲ ಎಂದನಿಸುತ್ತದೆ. ಚಿತ್ರದ ಇನ್ನೊಬ್ಬ ನಟಿ ಸಂಯುಕ್ತ ಹೆಗ್ಡೆ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಿರ್ದೇಶಕರ ಶ್ರಮ ಎದ್ದು ಕಾಣುತ್ತದೆ. ಚಿತ್ರದಲ್ಲಿ ಕೆಲವು ಸನ್ನಿವೇಶಗಳು ಹಿಂದಿಯ 3idiots, ಮಲಯಾಳಂನ Premam ಮತ್ತು Bangalore days ಚಿತ್ರಗಳಿಗೆ ಹೋಲಿಕೆಯಾಗುತ್ತದೆ.
ಇದೆಲ್ಲದರ ನಡುವೆ "ಕಿರಿಕ್ ಪಾರ್ಟಿ" ಒಂದು ಅದ್ಭುತ ಚಿತ್ರ. ಒಮ್ಮೆಯಾದರು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಬಹುದಾದ ಚಲನಚಿತ್ರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ