ನನ್ನ ಸ್ನೇಹಿತನಿಗೆ ಕಾಲೇಜು ಸೇರುವ ನಿಮಿತ್ತ Physical fitness certificateನ್ನು ಕೊಡಬೇಕಿತ್ತು, ಆದ್ದರಿಂದ ಅವನೊಂದಿಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ತೆರಳಿದೆವು. 5ರೂ ಚೀಟಿಯನ್ನು ಕೌಂಟರಿನಿಂದ ಪಡೆದು ಎಲ್ಲಿ ಹೋಗಬೇಕು ಎಂದು ವಿಚಾರಿಸಿದಾಗ 63ನಂ ಕೊಠಡಿಗೆ ಹೋಗಿ ಅಲ್ಲಿ ಸರ್ಜನ್ ಇರುತ್ತಾರೆ ಎಂದರು.
ನಾವು ಅಲ್ಲಿಗೆ ಹೋದಾಗ ಯಾರು ಇರಲಿಲ್ಲ ನಂತರ ದಾದಿಯರನ್ನು ಕೇಳಿದಾಗ ನೀವು 14ನಂ ಕೊಠಡಿಗೆ ಹೋಗಿ ಡಾ|| ಇರುತ್ತಾರೆ ಎಂದಾಗ ಅಲ್ಲಿಗೆ ತೆರಳಿದೆವು. ಅಲ್ಲಿ ಡಾ|| ನೀವು Height, weight, chestನ್ನು ದಾದಿಯರಲ್ಲಿ measure ಮಾಡಿಸಿ,vision testನ್ನು ಮಾಡಿಸಿ ಎಂದು ಸೌಜನ್ಯವಿಲ್ಲದೆ ಮಾತನಾಡಿಸಿ ಕಳಿಸಿದರು. ನಾವು ಎಲ್ಲಾ Measurement ಮತ್ತು test ಮುಗಿಸಿ ಹೋದಾಗ ಡಾ|| ಅಲ್ಲಿ ಇರಲಿಲ್ಲ, ಸ್ವಲ್ಪ ಹೊತ್ತು ಕಾದು ಕುಳಿತೆವು. ಆಗ ಬಂದ ಡಾ|| ನಾನು certificate ಬರೆಯುವಂತಿಲ್ಲ, Senior ಡಾ|| ಬರೆಯಬೇಕು, ಇಂದು ಆಸ್ಪತ್ರೆಗೆ ಮಂತ್ರಿಗಳು ಭೇಟಿ ನೀಡಿರುವ ಕಾರಣ ಎಲ್ಲಾ ಡಾ|| ಗಳು ಅಲ್ಲಿಗೆ ಹೋಗಿದ್ದಾರೆ ನೀವು ನಾಳೆ ಬೆಳಿಗ್ಗೆ ಬನ್ನಿ ಎಂದು ಕಳಿಸಿದರು.
ಅಲ್ಲಿಯೆ ಇದ್ದ ದಾದಿಯು 28ನಂ ಕೊಠಡಿಗೆ ಹೋಗಲು ಸೂಚಿಸಿದರು. ಅಲ್ಲಿಗೆ ಹೋದಾಗ ಡಾ|| ಈಗಷ್ಟೇ ಹೋದರು, ಹೊರಗೆಲ್ಲಾದರು ಸಿಕ್ಕಿದರೆ ಕೇಳಿ ನೋಡಿ ಎಂದರು.
ಅಲ್ಲಿಯೇ ಇದ್ದ HOD ಎಂಬ ಕೊಠಡಿಯಲ್ಲಿ ಡಾ|| ಇದ್ದಾರೆ ಎಂದು ಖಚಿತ ಪಡಿಸಿಕೊಂಡ ನಾವು ಅವರು ಹೊರಗೆ ಬರುವವರೆಗೆ ಕಾದೆವು. ಅಲ್ಲಿಂದ ಹೊರ ಬಂದ ಡಾ|| Physical fitness certificate ಬರೆದು ಕೊಡಿ ಎಂದಾಗ, ನೀವು 14ನಂ ಕೊಠಡಿಗೆ ಹೋಗಿ, ನಾನು ಅಲ್ಲಿಗೆ ಹೋಗುವೆನು ಎಂದರು. ನಾವು ಅಲ್ಲಿ ಸುಮಾರು 1ಗಂಟೆಗಳ ಕಾಲ ಕಾದರು ಡಾ|| ಬರಲಿಲ್ಲ.
ಕೇವಲ ಒಂದು Physical fitness certificate ಗಾಗಿ ಅಲ್ಲಿ ಇಲ್ಲಿ ಅಲೆದಾಡಿಸುವ ಆಸ್ಪತ್ರೆ ಸಿಬ್ಬಂದಿಗಳು ಬಡವರು,ಸಾಮಾನ್ಯ ವರ್ಗದವರು, ರೋಗ ಪೀಡಿತರನ್ನು ಹೇಗೆಲ್ಲ ಅಲೆದಾಡಿಸಬಹುದು.
ಯಾವ ಮಂತ್ರಿಗಳು ಯಾವ ಕಾರಣಕ್ಕೆ ಆಸ್ಪತ್ರೆಗೆ ಬಂದಿದ್ದರು ಎಂದು ನನಗೆ ತಿಳಿದಿಲ್ಲ ಆದರೆ ಎಲ್ಲಾ ವೈದ್ಯರು ಮಂತ್ರಿಗಳ ಹಿಂದೆ ಹೋದರೆ ರೋಗಿಗಳು ಗತಿಯೇನು..??
ಮಂತ್ರಿಗಳು ಆಸ್ಪತ್ರೆಗೆ ಹೋದರೆ ವೈದ್ಯರು ಕರ್ತವ್ಯ ನಿರ್ವಹಿಸುದಿಲ್ಲ ಎಂದಾಯಿತ!!!
ಕೊಡಗಿನಲ್ಲಿ ದೊಡ್ಡ ಆಸ್ಪತ್ರೆ ಎಂದು ಇರುವುದು ಮಡಿಕೇರಿಯ ಜಿಲ್ಲಾ ಆಸ್ಪತ್ರೆ. ಇಲ್ಲಿಯೇ ಹೀಗೆ ಇರುವಾಗ ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳ ಗತಿ ಏನು..??
ಯಾವುದೇ ಕಾಯಿಲೆ ಬಂದರು ಸರ್ಕಾರಿ ಆಸ್ಪತ್ರೆಗೆ ಹೋಗಬಾರದು ಎಂದು ಯೋಚಿಸಿದಾಗ, Physical fitnessನಂತಹ certificateಗಳಿಗೆ ಹೋಗಲೇ ಬೇಕಾದ ಅನಿವಾರ್ಯತೆ...!!! ಕಡೇಗು ನಮಗೆ Physical fitness certificate ಸಿಕ್ಕಿಲ್ಲ, ನಾಳೆ ಹೋಗಿ try ಮಾಡಿ ನೋಡೋಣ ಅಲ್ಲವೇ....!!!!

ಚೆನ್ನಾಗಿದೆ :)
ಪ್ರತ್ಯುತ್ತರಅಳಿಸಿಚೆನ್ನಾಗಿದೆ :)
ಪ್ರತ್ಯುತ್ತರಅಳಿಸಿTq u so much... all credits goes to you because you are the inspiration for me to write. I thought I should also write something, by looking at all your writings...
ಪ್ರತ್ಯುತ್ತರಅಳಿಸಿ